83
ಹೊಸದಿಲ್ಲಿ : ದೇಶದ ವಾಯು ರಕ್ಷಣಾ ಸಾಮರ್ಥ್ಯ ಬಲಪಡಿಸುವ ಉದ್ದೇಶದಿಂದ ಭಾರತೀಯ ಸೇನೆ ಸ್ವದೇಶಿ ನಿರ್ಮಿತ ಆಕಾಶ್ ಪೈಮ್ ವಾಯು ರಕ್ಷಣಾ ಕ್ಷಿಪಣಿಯನ್ನು ಲಡಾಕ್‌ನಲ್ಲಿ ಯಶಸ್ವಿ ಪರೀಕ್ಷೆ ಮಾಡಿದೆ. ಬುಧವಾರ ತಡರಾತ್ರಿ 15,000 ಅಡಿ ಎತ್ತರದಲ್ಲಿ. ಪೂರ್ವ ಲಡಾಕ್ ಪ್ರದೇಶದಲ್ಲಿ ಸೇನಾ ವಾಯು ರಕ್ಷಣಾ ತಂಡ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಹಿರಿಯ ಅಧಿಕಾರಿಗಳ ಸಹಯೋಗದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

