Home » ಪಾಕ್ ಪರ ಗೂಢಚಾರಿಕೆ : ವ್ಯಕ್ತಿ ಬಂಧನ
 

ಪಾಕ್ ಪರ ಗೂಢಚಾರಿಕೆ : ವ್ಯಕ್ತಿ ಬಂಧನ

by Kundapur Xpress
Spread the love

ಗಾಂಧೀನಗರ : ಭಾರತೀಯ ವಾಯುಪಡೆ ಮತ್ತು ಗಡಿ ಭದ್ರತಾ ಪಡೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್ ಜತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕಳ್ ನಿವಾಸಿಯಾಗಿರುವ ಆರೋಪಿ ಸಹದೇವ್ ಸಿಂಗ್ ಗೋಹಿಲ್ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿ ಕೆ.ಸಿದ್ದಾರ್ಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅದಿತಿ ಭಾರದ್ವಾಜ್ (28) ಹೆಸರಿನ ಮಹಿಳೆ 2023ರಲ್ಲಿ ವಾಟ್ಸಪ್ ಮೂಲಕ ಏಜೆಂಟ್ ಜತೆ ಸಂಪರ್ಕಕ್ಕೆ ಬಂದಿದ್ದಳು. ಆರೋಪಿ ಸಹದೇವ್ ಆಕೆಗೆ ನಿರ್ಮಾಣ ಹಂತದಲ್ಲಿರುವ ಐಎಎಫ್ ಮತ್ತು ಬಿಎಸ್‌ಎಫ್ ತಾಣಗಳ ಫೋಟೊ, ವಿಡಿಯೋಗಳನ್ನು ಕಳುಹಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

2025ರ ಆರಂಭದಲ್ಲಿ ಆತ ಸಿಮ್ ಕಾರ್ಡ್ ಖರೀದಿಸಿದ್ದ. ಓಟಿಪಿ ಸಹಾಯದಿಂದ ಅದಿತಿ ಭಾರದ್ವಾಜ್‌ಗಾಗಿ ಆ ಸಂಖ್ಯೆಯಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ. ಅದಾದ ಬಳಿಕ ಬಿಎಸ್ಎಫ್ ಮತ್ತು ಐಎಎಫ್‌ಗೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಆ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗಿದೆ.

ಗೋಹಿಲ್ ಮಾಹಿತಿ ಹಂಚಿಕೊಳ್ಳಲು ಬಳಸಿದ ಸಂಖ್ಯೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಗೋಹಿಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು 40,000 ರೂ. ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ

 

Related Articles

error: Content is protected !!