Home » ಮೋದಿಯಿಂದ ನೇಮಕಾತಿ ಪತ್ರ ವಿತರಣೆ
 

ಮೋದಿಯಿಂದ ನೇಮಕಾತಿ ಪತ್ರ ವಿತರಣೆ

ಒಂದೂವರೆ ವರ್ಷದಲ್ಲಿ ದಾಖಲೆ ಉದ್ಯೋಗ

by Kundapur Xpress
Spread the love

ಗೃಹ ಸಚಿವಾಲಯ ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ನೇಮಕಗೊಂಡ 71,000 ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ನೇಮಕಾತಿ ಪತ್ರ ವಿತರಿಸಿದರು.

ಉದ್ಯೋಗ ಮೇಳದ ಭಾಗವಾಗಿ ದೇಶದ 41 ಭಾಗಗಳಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗಿಯಾದ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಿಸಿ ಶುಭ ಹಾರೈಸಿದರು.

ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಸರ್ಕಾರದ ಎಲ್ಲಾ ನೀತಿಗಳನ್ನು ರೂಪಿಸುವಾಗ ಯುವಕರಿಗೆ ವಿಶೇಷ ಗಮನ ನೀಡಲಾಗುತ್ತದೆ. ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ನೀತಿಗಳನ್ನು ಬದಲಿಸಿದೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಉತ್ತೇಜಿಸಿದೆ. ಇಂದು ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದ್ದೇವೆ ಎಂದು ಹೇಳಿದರು.

 

Related Articles

error: Content is protected !!