Home » ಮತಗಳವು ಆರೋಪಕ್ಕೆ ದಾಖಲೆ ಕೊಡಿ ಇಲ್ಲವೇ ಕ್ಷಮೆಯಾಚಿಸಿ
 

ಮತಗಳವು ಆರೋಪಕ್ಕೆ ದಾಖಲೆ ಕೊಡಿ ಇಲ್ಲವೇ ಕ್ಷಮೆಯಾಚಿಸಿ

ಚುನಾವಣಾ ಆಯೋಗ

by Kundapur Xpress
Spread the love

ನವದೆಹಲಿ : ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೂ ಸೇರಿದಂತೆ ಕಳೆದ ಲೋಕಸಭಾ ಚುನಾವಣೆ ವೇಳೆ ದೇಶವ್ಯಾಪಿ ಭಾರೀ ಮತ ಕಳವು ಆಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಚುನಾವಣಾ ಆಯೋಗ, ನಿಮ್ಮ ಆರೋಪಗಳಿಗೆ 7 ದಿನದಲ್ಲಿ ಸೂಕ್ತ ದಾಖಲೆ ನೀಡಿ ಇಲ್ಲವೇ ದೇಶದ ಕ್ಷಮೆಯಾಚಿಸಿ ಎಂದು ಸೂಚಿಸಿದೆ. ಆರೋಪ ಸಾಬೀತಿನ ದಾಖಲೆ ಸಲ್ಲಿಸದೇ ಹೋದಲ್ಲಿ ಆರೋಪಗಳನ್ನು ಆಧಾರರಹಿತ ಎಂದು ಪರಿಗಣಿಸಲಾಗುವುದು ಎಂದೂ ಸ್ಪಷ್ಟಪಡಿಸಿದೆ.

ಒಂದೇ ಸುಳ್ಳನ್ನು ಪದೇ  ಪದೇ ಹೇಳಿದಾಕ್ಷಣ ಅದ. ಸತ್ಯವಾಗದು. ಸೂರ್ಯ ಪೂರ್ವದಲ್ಲೇ ಹುಟ್ಟುತ್ತಾನೆ. ಯಾರೋ ಹೇಳಿದರೆಂದು ಅವನು ಬೇರೆಲ್ಲೂ ಹುಟ್ಟುವುದಿಲ್ಲ. ಡಬಲ್ ವೋಟಿಂಗ್ ಅಥವಾ ಮತ ಕಳವಿನಂತಹ ಆರೋಪಗಳಿಂದ ಮತದಾರನಾಗಲಿ, ಚುನಾವಣಾ ಆಯೋಗವಾಗಲೀ ಹೆದರಿಕೊಂಡಿಲ್ಲ. ನಾವು ಮತದಾರರ ಜೊತೆ ಬಂಡೆಯಂತೆ ನಿಂತಿದ್ದೇವೆ ಎಂದು ಆಯೋಗ ಹೇಳಿದೆ. 

 

Related Articles

error: Content is protected !!