100
ನವದೆಹಲಿ : ದೇಶದ ಪ್ರತಿಷ್ಠಿತ ಐಐಟಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೆಹಲಿ ವಲಯದ ರಜಿತ್ ಗುಪ್ತಾ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೇ 18 ರಂದು ನಡೆದ ಈ ಪರೀಕ್ಷೆಯನ್ನು 1, 80,422 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 9404 ವಿದ್ಯಾರ್ಥಿನಿಯರು ಸೇರಿ ಒಟ್ಟು 54,378 ಮಂದಿ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ದೆಹಲಿ ವಲಯದ ರಾಜಸ್ಥಾನದ ಕೋಟಾದ ರಜಿತ್ ಗುಪ್ತಾ 360 ಕ್ಕೆ 332 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಸ್ತ್ರೀ ವಿಭಾಗದಲ್ಲಿ ಐಐಟಿ ಖರಗ್‌ಪುರ ವಲಯದ ದೇವದತ್ತ ಮಾಝಿ 312 ಅಂಕದಿಂದ ಪ್ರಥಮ ಸ್ಥಾನ ಪಡೆದಿದ್ದಾರೆ

