83
ದುರ್ಗಾಪುರ (ಪ.ಬಂಗಾಳ) : ಭಾರತದ ನಾಗರಿಕರಲ್ಲದ ಮತ್ತು ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಯಾರಾದರೂ ಸರಿ ಸಂವಿಧಾನದ ಪ್ರಕಾರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದುರ್ಗಾಪುರದಲ್ಲಿ ಶುಕ್ರವಾರ ಅಪಾರ ಜನಸ್ತೋಮ ನೆರೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ನಾಗರಿಕರಲ್ಲದ ಯಾರಾದರೂ, ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ್ದರೆ ಭಾರತದ ಸಂವಿಧಾನದ ಪ್ರಕಾರ ಅವರ ವಿರುದ್ಧ ಕಾನೂನು ಕ್ರಮ ಮುಂದುವರಿಯುತ್ತದೆ ಎಂದರು.
ವೋಟ್ ಬ್ಯಾಂಕ್‌ಗಾಗಿ ಅಕ್ರಮ ನುಸುಳುಕೋರರಿಗೆ ಪ್ರೋತ್ಸಾಹ, ಆಶ್ರಯ ನೀಡುವ ಮೂಲಕ ಟಿಎಂಸಿ ಸರ್ಕಾರ ಬಂಗಾಳದ ಅಸ್ಥಿತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಗಂಡಾಂತರಕ್ಕೊಡ್ಡಿದೆ ಎಂದು ಮಮತಾ ಸರ್ಕಾರವನ್ನು ತರಾಟೆಗೆತ್ತಿಕೊಂಡರು.

