Home » ವಾರಾಣಸಿ ಗ್ಯಾಂಗ್‌ರೇಪ್‌ : ಕ್ರಮಕ್ಕೆ ಮೋದಿ ತಾಕೀತು
 

ವಾರಾಣಸಿ ಗ್ಯಾಂಗ್‌ರೇಪ್‌ : ಕ್ರಮಕ್ಕೆ ಮೋದಿ ತಾಕೀತು

by Kundapur Xpress
Spread the love

ವಾರಾಣಸಿ : ವಾರಾಣಸಿಗೆ ವಿವಿಧ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡಲು ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಕ್ಷೇತ್ರದಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ವಿಮಾನದ ನಿಲ್ದಾಣದಲ್ಲಿಯೇ ಮಾಹಿತಿ ಪಡೆದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಾರಾಣಸಿಯಲ್ಲಿ ಇತ್ತೀಚೆಗಷ್ಟೇ 19 ವರ್ಷದ ಯುವತಿ ಮೇಲೆ 6 ದಿನ 23 ಜನರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಪೊಲೀಸರು ಇದುವರೆಗೆ 12 ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ವಕ್ಷೇತ್ರ ವಾರಾಣಸಿಗೆ ಬಂದಿಳಿಯುತ್ತಿದ್ದಂತೆ ಈ ಬಗ್ಗೆ ಮೋದಿ ಪೊಲೀಸ್ ಆಯುಕ್ತರು, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ, ‘ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಬೇಕು ಎಂದು ಸೂಚಿಸಿದರು’ ಎಂದು ಸಿಎಂ ಕಚೇರಿ ಹೇಳಿದೆ.

 

Related Articles

error: Content is protected !!