ನವದೆಹಲಿ : ಆಫ್ರಿಕಾದ ದೇಶಗಳಲ್ಲಿ ಸಾಕಷ್ಟು ಸಾವು-ನೋವಿಗೆ ಕಾರಣವಾದ ಮಂಕಿಪಾಕ್ಸ್ ವೈರಸ್‌ನ ಮೊದಲ ಪ್ರಕರಣವೊಂದು ಭಾರತದಲ್ಲಿ ದೃಢಪಟ್ಟಿದೆ ಮಂಕಿಪಾಕ್ಸ್ ಸಾಂಕ್ರಾಮಿಕ ವ್ಯಾಪಕವಾಗಿದ್ದ ದೇಶಕ್ಕೆ ತೆರಳಿದ್ದ ವೇಳೆ ಯುವಕನೊಬ್ಬನಿಗೆ ಈ ಸೋಂಕು ತಗುಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಾಹಿತಿ ನೀಡಿದೆ.
ಆದರೆ ಸೋಂಕಿತ ವ್ಯಕ್ತಿ 26 ವರ್ಷದ ಹರ್ಯಾಣದ ಹಿಸಾರ್ ಮೂಲದವನಾಗಿದ್ದಾನೆ. ಆತನನ್ನು ದಿಲ್ಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅದು ಹೇಳಿದೆ
ಈ ಹಿಂದೆ 2022ರ ಜುಲೈನಿಂದ 2024ರ ಮಾರ್ಚ್ ಅವಧಿಯಲ್ಲಿ 30 ಪ್ರಕರಣಗಳು ಭಾರತದಲ್ಲಿ ದಾಖಲಾಗಿದ್ದವು. ಇದ್ದಿದ್ದರಲ್ಲೇ ಸಮಾಧಾನದ ವಿಷಯವೆಂದರೆ, ಭಾರತದಲ್ಲಿ ಇದೀಗ ಪತ್ತೆಯಾದ ವೈರಸ್‌ನ ಮಾದರಿಯು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲು `ಕಾರಣವಾದ ಕಾಂಗೋ ದೇಶದಲ್ಲಿನ ‘ಕ್ಲಾಡ್ 1ಬಿ’ ತಳಿ ಅಲ್ಲ. ಬದಲಾಗಿ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾದ ‘ಕ್ಲಾಡ್- 2’ ತಳಿ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.