93
ಗುರುದಾಸಪುರ (ಪಂಜಾಬ್) : ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಅರೆಸೇನಾ ಪಡೆಯ ಸೈನಿಕನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಭಾನುವಾರ ಗಡಿಯಲ್ಲಿ ಬಂಧಿಸಿದೆ.
ಈತ ಬೇಹುಗಾರಿಕೆ ಉದ್ದೇಶದಿಂದ ಒಳನುಸುಳಲು ಯತ್ನಿಸಿದ್ದ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಪಾಕ್ ಅರೆಸೇನಾ ಪಡೆಯ ಬಹಾವಲುರ್ ವಲಯದ ಸೈನಿಕ ಮುಹಮ್ಮದ್ ಹುಸೇನ್ ಬಂಧಿತ. ಸದ್ಯ ಈತ ಬಿಎಸ್‌ಎಫ್ ವಶದಲ್ಲಿದ್ದು, ಆತನ ಉದ್ದೇಶವನ್ನು ಹೊರಗೆಳೆಯಲು ವಿಚಾರಣೆ ನಡೆಸಲಾಗುತ್ತಿದೆ

