81
ನವದೆಹಲಿ : ತಂತ್ರಜ್ಞಾನದ ಬಹುತೇಕ ಕ್ಷೇತ್ರಗಳಲ್ಲಿ ಆವರಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ಕೃತಕ ಬುದ್ದಿಮತ್ತೆ ಕ್ಷೇತ್ರಕ್ಕೂ ಕಾಲಿರಿಸಲಿರುವ ಬಗ್ಗೆ ಅದರ ಅಧ್ಯಕ್ಷ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಆರ್‌ಐಎಲ್‌ನ 48ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ರಿಲಯನ್ಸ್ ಇಂಟಲಿಜೆನ್ ಎಐ ಡೇಟಾ ಕೇಂದ್ರಗಳನ್ನು ನಿರ್ಮಿಸಲಿದ್ದು, ರಾಷ್ಟ್ರ ಮಟ್ಟದಲ್ಲಿ ತರಬೇತಿ ಮತ್ತು ನಿರ್ಣಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹಸಿರು ಶಕ್ತಿಯನ್ನು ಬಳಸಿ ಕೆಲಸ ಮಾಡಲಿದೆ’ ಎಂದರು.
ಇದೇ ವೇಳೆ, 2026ರ ಮೊದಲಾರ್ಧ ದಲ್ಲಿ ರಿಲಯನ್ ಜಿಯೋದ ಐಪಿಒ ಬಿಡುಗಡೆ ಮಾಡುವುದಾಗಿಯೂ ತಿಳಿಸಿದರು. ಈ ನಡುವೆ ಸಭೆಯಲ್ಲಿ ಪುತ್ರ ಅನಂತ್ ಅಂಬಾನಿ ಪಾಲ್ಗೊಂಡು ಸಂಭಾವ್ಯ ಉತ್ತರಾಧಿಕಾರಿ ಎಂಬ ಸುಳಿವು ನೀಡಿದರು.

