89
ಮುಂಬೈ : ಬುಧವಾರವಷ್ಟೇ ಲಾಭದ ಮುಖ ಮಾಡಿದ್ದ ಭಾರತದ ಷೇರುಪೇಟೆಗಳು ಗುರುವಾರ ಮತ್ತೆ ಇಳಿಮುಖ ಕಂಡಿವೆ. ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 644.64 ಅಂಕ ಕುಸಿತದಿಂದ 80,951.99ಕ್ಕೆ ಇಳಿದಿದೆ. ಮತ್ತೊಂದೆಡೆ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 203.75 ಅಂಕ ಪತನಗೊಂಡು 24,609.70ಕ್ಕೆ ತಲುಪಿದೆ. ಜಾಗತಿಕ ಮಾರಾಟ ಮತ್ತು ಅಮೆರಿಕದ ಸಾಲದ ಭೀತಿಯು ಭಾರತೀಯ ಷೇರುಪೇಟೆ ಕುಸಿತಕ್ಕೆ ಕಾರಣವಾಗಿದೆ. ಸೆನ್ಸೆಕ್ಸ್‌ನಲ್ಲಿ ಇಂಡಸ್ ಇಂಡ್ ಬ್ಯಾಂಕ್,. ಭಾರ್ತಿ ಏರ್‌ಟಲ್, ಅಲ್ಪಾಟೆಕ್ ಸಿಮೆಂಟ್ ಲಾಭಗಳಿಸಿದರೆ, ಬಜಾಜ್ ಫಿನ್‌ಸರ್ವ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ನಷ್ಟದಲ್ಲಿ ಅಂತ್ಯಗೊಂಡಿದೆ

