Home » ಮರೆಯಾದರೂ ಮರೆಯಲಾಗದ….ಅರ್ಜುನ
 

ಮರೆಯಾದರೂ ಮರೆಯಲಾಗದ….ಅರ್ಜುನ

by Kundapur Xpress
Spread the love

ಮೈಸೂರು : ಅರ್ಜುನ ಈ ಹೆಸರು ಕೇಳಿದಾಗಲೇ ಮೈ ರೋಮಾಂಚನವಾಗುತ್ತದೆ . ಪಾಂಡವರಲ್ಲಿ ಮಧ್ಯಮ ಪಾಂಡವ ಧನಸ್ಸಿನ ವಿದ್ಯೆಯಲ್ಲಿ ಅಗ್ರಗಣ್ಯ ಶ್ರೀ ಕೃಷ್ಣನಿಂದ ಭಗವದ್ಗೀತೆಯನ್ನು ಬೋಧಿಸಲ್ಪಟ್ಟ ಆ ಮಹಾನ್ ಪಾಂಡವ ವೀರನ ಹೆಸರು ಅರ್ಜುನ . ಸತತ ಎಂಟು ವರ್ಷಗಳ ಕಾಲ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ತನ್ನದೇ ಆದಂತಹ ಗಂಭೀರವಾದಂತ ನಡಿಗೆಯಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ನಮ್ಮ ಗಜವೀರ ಅರ್ಜುನ . ಗಂಭೀರವಾದಂತಹ ನಡಿಗೆ ತನ್ನ ಯಜಮಾನ ಮಾವುತನ ಅಚ್ಚುಮೆಚ್ಚಿನ ಆನೆ ಅರ್ಜುನ . ಅರ್ಜುನ ಹುಟ್ಟಿದ್ದು 1960. ಅರ್ಜುನನ ತೂಕ 6408 ಕೆಜಿ ಎತ್ತರ 9 ಅಡಿ 8 ಇಂಚು.1968 ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಯಿತು . ಅರ್ಜುನ ಪಳಗಿದ ನಂತರ, 1990 ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಸಮಯದಲ್ಲಿ ಮೆರವಣಿಗೆಗಳನ್ನು ಒಳಗೊಂಡ ಶಿಬಿರಗಳಲ್ಲಿ ಅವರನ್ನು ನಿಯಮಿತವಾಗಿ ಮಾಡಲಾಯಿತು .  2012 ರಿಂದ 2019 ರವರೆಗೆ ತಾಯಿ ಚಾಮುಂಡೇಶ್ವರಿಯನ್ನು ಜಂಬೂ ಸವಾರಿಯಲ್ಲಿ ಕರೆದೊಯ್ಯುವ ಕೆಲಸವನ್ನು ಅರ್ಜುನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದ .ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಈ ಘಟನೆಯಲ್ಲಿ ಅರ್ಜುನ ಆನೆ ಮೃತಪಟ್ಟಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಅರ್ಜುನ ಮಹಾಭಾರತದಲ್ಲಿ ಹೋರಾಡಿದಂತಹ ಒಬ್ಬ ಪಾಂಡವ ವೀರನ ಹೆಸರು. ಹಾಗೆಯೇ ಅರ್ಜುನ ಒಬ್ಬ ಮೈಸೂರಿನ ಅಧಿದೇವತೆಯನ್ನು ಎಂಟು ಬಾರಿ ತನ್ನ ಬೆನ್ನ ಮೇಲೆ ಹೊತ್ತುಕೊಂಡು ಜಂಬೂ ಸವಾರಿಯನ್ನು ಮಾಡಿ ಅರಣ್ಯ ಕಾರ್ಯಾಚರಣೆಯಲ್ಲಿ ಒಂಟಿ ಸಲಗದೊಂದಿಗೆ ಹೋರಾಡಿ ವೀರ ಸ್ವರ್ಗವನ್ನು ಪಡೆದಂತ ಗಜರಾಜನ ಹೆಸರು. ಎಂಟು ಬಾರಿ ಮೈಸೂರಿನ ಅಧಿದೇವತೆಯನ್ನು ಹೊತ್ತಂತಹ ಅರ್ಜುನ ಇನ್ನು ನೆನಪು ಮಾತ್ರ . ಅರ್ಜುನನ ನೆನಪು ಎಲ್ಲರ ಹೃದಯದಲ್ಲು ಅಚ್ಚಳಿಯದೆ ಉಳಿಯುವಂತೆ ಮಾಡಿ ಮರೆಯಾದರೂ  ಮರೆಯಲಾಗದ  ಆ ಮಹಾನ್ ಗಜರಾಜನಿಗೆ ಮಹಾನ್ ಪ್ರಣಾಮಗಳು

ಪ್ರದೀಪ್‌  ಚಿನ್ಮಯಿ ಆಸ್ಪತ್ರೆ ಕುಂದಾಪುರ 

   

Related Articles

error: Content is protected !!