ದೆಹಲಿ : ಭೂಪಾಲ್ ಮತ್ತು ದೆಹಲಿ ಮದ್ಯೆ ಚಲಿಸುತಿದ್ದ ಒಂದೇ ಭಾರತ್ ಎಕ್ಸ್ ಪ್ರೆಸ್ ನ ಒಂದು ಕೋಚ್ ನ ಬ್ಯಾಟರಿ ಬಾಕ್ಸ್ ನಲ್ಲಿ ಇಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ ಕಥೋರ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು ಯಾವುದೇ ದುರ್ಘಟನೆ ಸಂಭವಿಸಿಲ್ಲ
ಈ ರೈಲು ಬೆಳಿಗ್ಗೆ 5.40 ರ ಸುಮಾರಿಗೆ ಭೂಪಾಲ್ ನಿಂದ ಹೊರಟು ದೆಹಲಿಯ ನಿಜಾಮುದ್ದೀನ್ ನಿಲ್ದಾಣವನ್ನು ಮಧ್ಯಾಹ್ನ 1.10 ರ ಸುಮಾರಿಗೆ ತಲುಪುತ್ತದೆ ವಂದೇ ಭಾರತ್ ರೈಲಿನ ಚಕ್ರಗಳ ಮಧ್ಯೆ ಕಾಣಿಸಿಕೊಂಡ ಬೆಂಕಿಯನ್ನು ಗಮನಿಸಿದ ಅಗ್ನಿಶಾಮಕದಳವು ತಕ್ಷಣ ಬೆಂಕಿಯನ್ನು ನಂದಿಸಿದ್ದು ಬೆಂಕಿ ಬ್ಯಾಟರಿ ಬಾಕ್ಸ್ ಗೆ ಸೀಮಿತವಾಗಿದೆ ಎಂದು ವರದಿಯಾಗಿದೆ