Home » ಮನೆ ಮಾತು….
 

ಮನೆ ಮಾತು….

by Kundapur Xpress
Spread the love

ಭಾವನೆ ಮತ್ತು ಸ್ಪಂದನೆ ಎರಡು ಶಬ್ದಗಳನ್ನು ಕೇಳಿದಾಗ ಮೊದಮೊದಲು ಒಂದೇ ರೀತಿಯ ಪ್ರಾಸಭದ್ಧ ಶಬ್ದಗಳು ಎಂದು ತಿಳಿಯಬಹುದು. ಮನಸ್ಸಿಗೆ ಸ್ಪಂದನೆ ಮತ್ತು ಭಾವನೆಗಳು ತುಂಬಾ ಹತ್ತಿರದಿಂದ ತಟ್ಟುವ ಶಬ್ದಗಳು. ಮಗು ಅಮ್ಮನ ಗರ್ಭದಲ್ಲಿದ್ದಾಗ ಅಮ್ಮನ ಮಮತೆಯ ಭಾವನೆಗಳಿಗೆ ಮಗು ಕರಳಬಳ್ಳಿಯ ಮೂಲಕ ಸ್ಪಂದಿಸುವ ರೀತಿ ಬಹಳ ಸುಂದರ. ಮನಸ್ಸೆಂಬುದು ಪ್ರಶಾಂತವಾದ ಸರೋವರ ವಿದ್ದಂತೆ. ಪ್ರಶಾಂತವಾದ ಸರೋವರಕ್ಕೆ ಒಂದು ಕಲ್ಲೆಸಿದರೆ ಸಾಕು ಅದರಲ್ಲಿರುವ ನೀರಿನಲ್ಲಿ ಅನೇಕ ಅಲೆಗಳು ಬರಲು ಪ್ರಾರಂಭವಾಗುತ್ತದೆ.
ಮನಸ್ಸಿನಲ್ಲಿ ಕೂಡ ಇದೇ ತರಹದ ಅನೇಕ ಭಾವನೆಗಳು ಬಂದಾಗ ಕೆಲವೊಮ್ಮೆ ಮನಸ್ಸು ಕೂಡ ಅಲ್ಲೋಲಕಲ್ಲೋಲವಾಗುವುದುಂಟು. ರಮಣ ಮಹರ್ಷಿಗಳು ಹೇಳಿದಂತೆ ಯಾವಾಗ ನಮ್ಮ ಮನಸ್ಸು ತುಂಬಾ ಶಾಂತವಾಗಿರುತ್ತದೆಯೋ ಆಗ ನಮ್ಮ ಮನಸ್ಸಿನಲ್ಲಿ ದೇವರು ನೆಲೆಸಿದ್ದಾನೆ ಎಂದು ಅಂದುಕೊಳ್ಳಬಹುದು. ಮನಸ್ಸಿನ ಭಾವನೆಗಳಿಗೆ ಯಾರು ಸ್ಪಂದಿಸುತ್ತಾರೋ ಅವರು ನಮ್ಮ ಮಿತ್ರರಾಗಿಬಿಡುತ್ತಾರೆ.ರೋಗಿಯ ಭಾವನೆಗಳಿಗೆ ವೈದ್ಯರ ಸ್ಪಂದಿಸಿ ವೈದ್ಯರು ಹೇಳಿದ ಚಿಕಿತ್ಸೆಗೆ ರೋಗಿಯು ಸ್ಪಂದಿಸಿದರೆ ರೋಗಿಯು ಕೂಡ ಬೇಗ ಗುಣವಾಗುತ್ತಾನೆ. ಭಾವನೆ ಮತ್ತು ಸ್ಪಂದನೆ ಈ ಎರಡು ಶಬ್ದಗಳಿರದಿದ್ದರೆ ಜೀವನವೇ ಶೂನ್ಯ ಅನಿಸಿಬಿಡುತ್ತದೆ. ಯುವ ಜನಾಂಗದ ಕಾರ್ಯ ವ್ಯಾಪ್ತಿಯಲ್ಲಿ ಈ ಎರಡು ಶಬ್ದಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸ್ಪಂದನೆ ಇರದಿದ್ದರೆ ಜೀವನ ಶೂನ್ಯ. ಭಾವನೆ ಇರದಿದ್ದರೆ ಮನುಷ್ಯನು ಕೂಡ ಶೂನ್ಯ. ಎಷ್ಟು ಅರ್ಥವತ್ತಾದ ಮಾತು ಅಲ್ಲವೇ ? ಒಂದು ಸಲ ಸ್ವಲ್ಪ ಯೋಚಿಸಿ ನೋಡಿ ಸ್ಪಂದನೆ ಮತ್ತು ಭಾವನೆ ಇವೆರಡು ಇಲ್ಲದಿದ್ದರೆ ಜೀವನ ನಡೆಸಲು ಸಾಧ್ಯವೇ ಇಲ್ಲ. ಇವೆರಡು ಶಬ್ದಗಳು ಜೀವನದ ಪ್ರತಿಯೊಂದು ವ್ಯಾಪ್ತಿಯಲ್ಲಿ ಬಂದೇ ಬರುತ್ತವೆ. ಚಿಕ್ಕವರಿದ್ದಾಗ ,ಪ್ರೌಢಾವಸ್ಥೆಗೆ ಬಂದಾಗ ವೃದ್ಧಾಪ್ಯದಲ್ಲಿದ್ದಾಗ ಈ ಎರಡು ಶಬ್ದಗಳು ಪ್ರತಿಯೊಂದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೇಳಲು ಅತ್ಯಂತ ಸರಳ ಎರಡು ಶಬ್ದಗಳು ಆದರೆ ಅದರ ಕಾರ್ಯ ವ್ಯಾಪ್ತಿ ಮಾತ್ರ ಬಹಳ  ಗಂಭೀರವಾದದ್ದು.

ಪ್ರದೀಪ,ಚಿನ್ಮಯಿ ಆಸ್ಪತ್ರೆ ಕುಂದಾಪುರ.

   

Related Articles

error: Content is protected !!