ಮಧೂರು : ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವುದಕ್ಕಿಂತ ಮೊದಲು ಗಣಪತಿಯನ್ನು ಆರಾಧನೆ ಮಾಡೋದು ನಮ್ಮ ಹಿಂದೂ ಧರ್ಮದ ಪದ್ಧತಿ. ಗಣಪತಿಯನ್ನು ಪ್ರಥಮ ಪೂಜಿತ ಎಂದು ಕರೆಯುತ್ತಾರೆ . ಗಣಪತಿಯ ಪ್ರಮುಖ ಕ್ಷೇತ್ರಗಳಲ್ಲಿ ಇಡಗುಂಜಿ, ಗೋಕರ್ಣ, ಕುಂಭಾಶಿ, ಹಟ್ಟಿಯಂಗಡಿ, ಶರವು ಗಣಪತಿ,ಮಧೂರು ಗಣಪತಿ ಇದೆ ಗಣಪತಿಯ ಆರು ಪ್ರಸಿದ್ಧ ಕ್ಷೇತ್ರಗಳು ಮಧೂರು ದೇವಸ್ಥಾನ ಮೂಲತಃ ಶ್ರೀಮದ್ ಅನಂತೇಶ್ವರ ದೇವಸ್ಥಾನವಾಗಿತ್ತು . ಪುರಾಣಗಳ ಪ್ರಕಾರ ಓರ್ವ ಮುದುಕಿಯು ಉದ್ಭವ ಶಿವಲಿಂಗವನ್ನು ಕಂಡುಹಿಡಿದಳು ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ .ಇನ್ನೊಂದು ಪುರಾಣವು ಮಧೂರು ದೇವಸ್ಥಾನದಲ್ಲಿರುವ ಗಣೇಶನ ವಿಗ್ರಹದ ಬಗ್ಗೆ ಚಿಕ್ಕ ಬ್ರಾಹ್ಮಣ ಹುಡುಗ ದೇವಸ್ಥಾನದ ಗೋಡೆಯ ಮೇಲೆ ಸಣ್ಣ ಗಣೇಶನ ಚಿತ್ರವನ್ನು ಕೆತ್ತಿದ್ದಾನೆ ಎಂದು ಹೇಳಲಾಗುತ್ತದೆ.
ನಂತರ ಅದು ಬೆಳೆದು ದೊಡ್ಡ ಗಣೇಶನ ವಿಗ್ರಹವಾಯಿತು.ಹುಡುಗ ಅವನನ್ನು ಬೊಡ್ಡಜ್ಜ ಅಥವಾ ಬೊಡ್ಡ ಗಣೇಶ ಎಂದು ಕರೆಯತೊಡಗಿದ.ನಂತರ ಈ ವಿಗ್ರಹಕ್ಕೆ ಮದನಂತೇಶ್ವರ ಸಿದ್ಧಿ ವಿನಾಯಕ ಎಂದು ನಾಮಕರಣ ಮಾಡಲಾಯಿತು.ಪ್ರಸ್ತುತ ಮಧೂರು ದೇವಸ್ಥಾನದ ನವೀಕರಣದ ಕಾರ್ಯ ನಡೆಯುತ್ತಿದೆ. ಮಧೂರು ದೇವಸ್ಥಾನದ ಬ್ರಹ್ಮ ಕಲಶ 2025 ರಲ್ಲಿ ನಡೆಯಲಿದೆ .ಮಧೂರು ದೇವಸ್ಥಾನವು ಕಾಸರಗೋಡು ಪಟ್ಟಣದಿಂದ 7 ಕಿಮೀ (4.3 ಮೈಲಿ) ದೂರದಲ್ಲಿರುವ ಮೊಗ್ರಾಲ್ ನದಿಯ ದಡದಲ್ಲಿರುವ ಜನಪ್ರಿಯ ಶಿವ ಮತ್ತು ಗಣಪತಿ ದೇವಸ್ಥಾನವಾಗಿದೆ, ಇದನ್ನು ಸ್ಥಳೀಯವಾಗಿ ಮಧುವಾಹಿನಿ ಎಂದು ಕರೆಯಲಾಗುತ್ತದೆ .ಈ ದೇವಾಲಯದ ಮುಖ್ಯ ದೇವರು ಮದನಂತೇಶ್ವರ ಎಂದು ಕರೆಯಲ್ಪಡುವ ಶಿವನಾಗಿದ್ದರೂ , ಕಾಮನನ್ನು ಕೊಂದ ದೇವರು , ಬಯಕೆಗಳ ದೇವರು, ಮುಖ್ಯ ಗರ್ಭಗುಡಿಯಲ್ಲಿಯೇ ದಕ್ಷಿಣಾಭಿಮುಖವಾಗಿ ಸ್ಥಾಪಿಸಲಾದ ಗಣಪತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.ಕಾಶಿ ವಿಶ್ವನಾಥ , ಧರ್ಮಶಾಸ್ತ , ಸುಬ್ರಹ್ಮಣ್ಯ,ದುರ್ಗಾ ಪರಮೇಶ್ವರಿ, ವೀರಭದ್ರ ಮತ್ತು ಗುಳಿಕ ಈ ದೇವಾಲಯದ ಉಪ ದೇವತೆಗಳು. ಮುಖ್ಯ ಗರ್ಭಗುಡಿಯೊಳಗೆ ಪಾರ್ವತಿ ದೇವಿಯ ಉಪಸ್ಥಿತಿಯೂ ಇದೆ .
ಪ್ರದೀಪ್, ಚಿನ್ಮಯಿ ಆಸ್ಪತ್ರೆ,ಕುಂದಾಪುರ