Home » “ಸಕ್ಕರೆ ಗುಳಿಗೆಗಳ ಪವಾಡ”
 

“ಸಕ್ಕರೆ ಗುಳಿಗೆಗಳ ಪವಾಡ”

by Kundapur Xpress
Spread the love
ಈ ಮಾತೃ ಭೂಮಿಯಲ್ಲಿ ಜನಿಸಿದ ಜೀವಿಗಳಿಗೆ ರೋಗಗಳ ಬಾಧೆ ಅನಿವಾರ್ಯ. ಅದರ ನಿವಾರಣೆಗಾಗಿಯೇ ಅನೇಕ ಪ್ರಯತ್ನಗಳ ಫಲವೇ ಬಹುವಿಧದ ವೈದ್ಯಕೀಯ ಪದ್ಧತಿಗಳ ಆವಿಷ್ಕಾರ. ಹಿಂದೆ ಪ್ರಚಲಿತವಿದ್ದ ಭಾರತೀಯ ವೈದ್ಯ ಪದ್ಧತಿಯೇ ಆಯುರ್ವೇದಿಯ ಚಿಕಿತ್ಸಾ ಪದ್ಧತಿ ಎಂದು ಹೆಸರು. ಪ್ರಸ್ತುತ ಈಗ ಚಾಲ್ತಿಯಲ್ಲಿರುವ ಅಲೋಪತಿಯು ಜಗತ್ತಿನ ಅನೇಕ ವೈದ್ಯ ಪದ್ಧತಿಗಳಲ್ಲಿ ಮುಂಚೂಣಿಯಲ್ಲಿರುವ ಪದ್ಧತಿಯಾಗಿದೆ. ಎರಡನೆಯ ಅತಿ ದೊಡ್ಡ ವೈಜ್ಞಾನಿಕ ರೋಗ ಶುಶ್ರೂಷಾ ಪದ್ಧತಿಯೇ ಹೋಮಿಯೋಪಥಿ”.
ವಿಶ್ವಾದಾದ್ಯಂತ ಎಪ್ರಿಲ್ ತಿಂಗಳ ಹತ್ತನೇ ತಾರೀಕನ್ನು ವಿಶ್ವ ಹೋಮಿಯೋಪಥಿ ದಿನ ಎಂದು ಆಚರಿಸುತ್ತೇವೆ. ಜರ್ಮನಿಯ
ಡಾ. ಸಾಮ್ಯುಯೆಲ್ ಹಾನಿಮನ್ (Samuel Hahnimann) ಅವರ ನಿರಂತರ ಸಂಶೋಧನೆಯ ಫಲವೇ ಇಂತಹ ಒಂದು ಸರಳ ಸುಂದರ ವೈಜ್ಞಾನಿಕ ಪದ್ಧತಿಯ ಆವಿಷ್ಕಾರ. ಇವರು ಅಲೋಪತಿಯಲ್ಲಿ ಸುಮಾರು 20 ವರ್ಷಗಳ ಕಾಲ ರೋಗಿಗಳ ಶುಶ್ರೂಷೆ ಮಾಡುತ್ತಾ ಇದ್ದರು. ಮುಂದೆ ಇದರಲ್ಲಿರುವ ದೋಷಗಳನ್ನು ಕಂಡುಹಿಡಿದು ಬೇರೆಯೇ ಒಂದು ಹೊಸ ಸಂಶೋಧನೆಯನ್ನು ನಡೆಸುತ್ತಾ ನಡೆಸುತ್ತಾ, ಮುಂದೆ ಕಂಡು ಹಿಡಿದ ಈ ವಿಶೇಷ ವೈದ್ಯಕೀಯ ಪದ್ಧತಿಯ ಫಲವೇ ಹೋಮಿಯೋಪಥಿ. ಇದು ಪ್ರಪಂಚದ 40ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಾಶಸ್ತ್ಯವನ್ನು ಪಡೆದಿದೆ. ನಮ್ಮ ದೇಶದ ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಹೋಮಿಯೋ ಪದ್ಧತಿಯು ಮುಂಚೂಣಿಯಲ್ಲಿದೆ.
ಹಾಗಾದರೆ ಏನಿದು ಈ ಪದ್ಧತಿಯ ವೈಶಿಷ್ಟ್ಯ?
ಸರಳವಾಗಿ ಹೇಳುವುದಾದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು. ಅಂದರೆ ಯಾವ ರೋಗಾಣುಗಳಿಂದ ರೋಗ ಬರುವುದೋ ಅದೇ ರೋಗಾಣುವಿನಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು. ಇದು ವೈರಸ್ ಗಳಿಂದ ಬರುವ ರೋಗಗಳಿಗೆ ಉತ್ತಮವಾದ ಔಷಧಿ. ಅಂದರೆ ಲಸಿಕೆ ತರವೇ ಹೋಮಿಯೋಪಥಿ ಕೆಲಸ ಮಾಡುತ್ತದೆ. ಇದರಲ್ಲಿ ರೋಗಿಗಿಂತಲೂ, ರೋಗಕ್ಕಿಂತಲೂ, ರೋಗಿಗೇ ಪ್ರಾಶಸ್ತ್ಯ. ರೋಗಗಳ ಲಕ್ಷಣಗಳಿಗೆ ಅನುಸಾರವಾಗಿ ಔಷಧಿ ಕೊಡಲ್ಪಡುತ್ತದೆ. ಹೊರತು, ರೋಗಕ್ಕೆ ಔಷಧಿಯಲ್ಲ. ಆಯುರ್ವೇದದಲ್ಲಿ ಔಷಧಿಗಳನ್ನು ಕುದಿಸಿ, ಪಾಕಬರಿಸಿ, ಹೆಚ್ಚಿನ ಪ್ರಮಾಣದಲ್ಲಿ ಕಷಾಯ, ಕಲ್ಕ , ಅರಿಷ್ಟ ಇತ್ಯಾದಿಗಳ ರೂಪದಲ್ಲಿ ಕೊಡುತ್ತಾರೆ. ಆದರೆ ಹೋಮಿಯೋಪಥಿಯಲ್ಲಿ ಅದರ ಸತ್ತ್ವವನ್ನು ತೆಗೆದು ಅತ್ಯಲ್ಪ ಪ್ರಮಾಣದಲ್ಲಿ ಅಂದರೆ
10 ^6 – 10 ಪ್ರಮಾಣದಲ್ಲಿ ಕೊಡಲಾಗುತ್ತದೆ. ಈ ಔಷಧಗಳ ಮೂಲದ್ರವ್ಯ 80% ಸಸ್ಯಜನ್ಯ, 15% ರಾಸಾಯನಿಕಗಳು, 5% ಪ್ರಾಣಿಜನ್ಯ. ಈ ಪದ್ಧತಿಯ ಮೂಲಗುಣ Symilia, Symilipus, ಮತ್ತು curranter ಅಂದರೆ ಲಸಿಕೆ ತಯಾರಿಸುವ ರೀತಿಯಲ್ಲೇ ಇದರ ತಯಾರಿ ಇರುತ್ತದೆ. ಅತ್ಯಲ್ಪ ಪ್ರಮಾಣದ ಔಷಧವು ಸಕ್ಕರೆಯ ಸಣ್ಣ ಸಣ್ಣ ಗುಳಿಗೆಗಳಿಗೆ ಹಾಕಿ ರೋಗಿಗೆ ನೀಡಲಾಗುತ್ತದೆ.
ಆದರೆ ಹೋಮಿಯೋಪತಿಯ ಸಕ್ಕರೆಯ ಸಣ್ಣ ಗುಳಿಗೆಗಳು ನಾಲಿಗೆಗೆ ಬಿದ್ದಕೂಡಲೇ ಅದರ ಪರಿಣಾಮ ನಾಲಿಗೆಯಲ್ಲಿರುವ ನರಗಳ ಮೂಲಕ ಮೆದುಳುಗಳಿಗೆ ನೇರವಾಗಿ ಹೋಗಿ ತನ್ನ ಕಾರ್ಯವನ್ನು ಆರಂಭಿಸುತ್ತದೆ. ಈ ಪದ್ಧತಿಯಲ್ಲಿ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಇದು ಹೋಮಿಯೋಪಥಿಯ ಅತ್ಯಂತ ಉಪಯುಕ್ತ ವಿಚಾರವಾಗಿದೆ. ಹಾಗೇಯೇ ಅದರ ಬಗ್ಗೆಯೇ ವಾದವೇ ಇಲ್ಲವೆಂದಲ್ಲ. ಹೋಮಿಯೊ ಔಷಧಿಗಳ ಪರಿಣಾಮ ಬಹಳ ನಿಧಾನ ಎಂಬ ತಪ್ಪು ತಿಳುವಳಿಕೆ ಇದೆ. ಇದು ಖಂಡಿತ ತಪ್ಪು. ದೀರ್ಘಕಾಲಿಕ ರೋಗಿಗಳಿಗೆ ನಿಧಾನವಾದ ಪ್ರತಿಕ್ರಿಯೆ ಪ್ರಕ್ರಿಯೆ ವಿನಾ ಉಳಿದಂತೆ ಇದರ ಪರಿಣಾಮ ವೇಗವಾಗಿ ಇರುತ್ತದೆ. ಡೆಂಗ್ಯುವಿನಂತಹ ರೋಗಗಳಲ್ಲಿ ಮೂರೇ ದಿನದಲ್ಲಿ ಹೋಮಿಯೋಪಥಿಯಿಂದಾಗಿ ಗುಣಮುಖರಾದಂತಹ ಸಾಕಷ್ಟು ಉದಾಹರಣೆಗಳಿವೆ. ಎರಡನೆಯದಾಗಿ, ಈ ಔಷಧ ಸೇವನೆಯಿಂದ ಮೊದಲು ಸ್ವಲ್ಪ ಜೋರಾದಂತೆ ಕಾಣುತ್ತದೆ. ಇದರಲ್ಲಿ ಸ್ಟಿರಾಯ್ಡ್ ಬಳಸುತ್ತಾರೆ, ಇದನ್ನು ತೆಗೆದುಕೊಳ್ಳುವಾಗ ಚಹಾ, ಕಾಫಿ ಕುಡಿಯಬಾರದು ಇತ್ಯಾದಿಯಾಗಿ ಹಲವಾರು ಟೀಕೆಗಳಿವೆ. ಇದೆಲ್ಲಾ ಸತ್ಯಕ್ಕೆ ದೂರವಾದ ವಿಚಾರ.
ಇನ್ನು ಈ ಪುಟ್ಟ ಸಕ್ಕರೆ ಗುಳಿಗೆಗಳು ಡಯಾಬಿಟಿಸ್ ನವರು ತೆಗೆದುಕೊಳ್ಳಬಹುದೋ ಅನ್ನುವ ಒಂದು ಪ್ರಶ್ನೆ ಇದೆ. ಆದರೆ ಖಂಡಿತವಾಗಿಯೂ ತೆಗೆದುಕೊಳ್ಳಬಹುದು. ಏಕೆಂದರೆ ಅದು ನಿಜವಾಗಿಯೂ ಸಕ್ಕರೆ ಅಲ್ಲ ಸೆಕ್ಯುರಂ ಲಾಕ್ಟೀಸ್ (Securam Lactis) ಇದು ಆಡಿನ ಹಾಲಿನಿಂದ ಮಾಡಿದ್ದು. ಆದ್ದರಿಂದ ಇದಕ್ಕೂ ಸಕ್ಕರೆಗೂ ಯಾವ ಸಂಬಂಧವು ಇಲ್ಲ. ಆದರೆ ಈ ಸಣ್ಣ ಸಣ್ಣ ಸಕ್ಕರೆ ಗುಳಿಗೆಗಳಂತಹ ಗುಳಿಗೆಗಳು ಮನುಷ್ಯನನ್ನು ಮಾತ್ರವಲ್ಲ, ಸಾಕುಪ್ರಾಣಿಗಳಿಗೂ ಮಾತ್ರವಲ್ಲ, ಇಂದು ಹುಟ್ಟಿದ ಮಗುವಿನಿಂದ ತೊಡಗಿ ಸರ್ಜರಿ ಕೇಸಿನಲ್ಲಿ ತನ್ನ ಪವಾಡವನ್ನು ತೋರಿಸುವುದು ಅಕ್ಷರಶಃ ಸತ್ಯ. ಕ್ಯಾನ್ಸರ್ ನ ಅಡ್ಡ ಪರಿಣಾಮಗಳಿಗೆ, ಗೋಯಿಟರ್, ಲಿಂಫ್ ಗಳು, ಗುಳ್ಳೆಗಳು, ಉಳುಕಿದ್ದು, ಕಿಡ್ನಿ ಸ್ಟೋನ್, ಲಿಗಾಮೆಂಟ್ ಟೇರ್ (Ligament tare) ಇಂತಹ ವಿಷಯಗಳಲ್ಲಿ ಇದು ತುಂಬಾ ಉತ್ತಮ ಪರಿಣಾಮಗಳನ್ನು ನೀಡುತ್ತದೆ. ಪ್ರಾಣಿಗಳ ಮೆನೆಂಜೈಟಿಸ್ ( Meningitis ), ( ಕೆಚ್ಚಲು ಬಾವು, ಚರ್ಮರೋಗಗಳು ಹಾಗೂ ಇತರ ರೋಗಗಳಿಗೆ ಈ ಔಷಧಗಳು ಶೀಘ್ರ ಪರಿಣಾಮಕಾರಿ, ಆದರೆ ಸಮಯವರಿತು ಉತ್ತಮ ವೈದ್ಯರ ಸಲಹೆಯಂತೆ ಇದನ್ನು ಸೇವಿಸಬೇಕು. ಇಂತಹ ಉತ್ತಮ ವೈದ್ಯಕೀಯ ಪದ್ಧತಿಯನ್ನು ನೀಡಿದ ಪರಂಪರೆಗೆ ಈ ದಿನ ಕೃತಜ್ಞತೆ ಸಲ್ಲಿಸೋಣ.
ಸ್ವರ್ಣ ,ಕುಂದಾಪುರ
 

Related Articles

error: Content is protected !!