Home » ನರಹರಿ ಪರ್ವತದ ಸದಾಶಿವ ದೇವಸ್ಥಾನ
 

ನರಹರಿ ಪರ್ವತದ ಸದಾಶಿವ ದೇವಸ್ಥಾನ

by Kundapur Xpress
Spread the love

ನರಹರಿ ಪರ್ವತ ಪ್ರಕೃತಿಯ ಮಡಿಲಲ್ಲಿರುವ ರಮಣೀಯ ತಾಣ. ನೋಡಲು ಅತ್ಯಂತ ಸುಂದರ ಮತ್ತು ಪ್ರಕೃತಿಯ ಸೌಂದರ್ಯದಿಂದ ಕೂಡಿರುವ ಬೆಟ್ಟ ಇದು. ಸುತ್ತಲೂ ಕಾಣಸಿಗುವ ಹಸಿರು ಗಿಡಗಳು. ಆಕಾಶಕ್ಕೆ ಮುತ್ತಿಕ್ಕುವ ಬೆಳ್ಳಿ ಮೋಡಗಳು. ನೀಲಾಕಾಶದ ಮಧ್ಯೆ ಸೂರ್ಯದೇವನ ಆ ಕಿರಣಗಳು ನೇರವಾಗಿ ಬೆಟ್ಟದಲ್ಲಿದ್ದ ಆ ಸದಾಶಿವನ ಗೋಪುರಕ್ಕೆ ಸ್ಪರ್ಶಿಸುವಾಗ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಮಹಾ ಪುಣ್ಯ. ಪ್ರಕೃತಿಯ ರಮಣೀಯ ಕ್ಷೇತ್ರದಲ್ಲಿ ನೆಲೆ ನಿಂತು ಭಕ್ತರ ಆಸೆಗಳನ್ನು ಈಡೇರಿಸುತ್ತಿದ್ದಾನೆ ನರಹರಿ ಪರ್ವತದಲ್ಲಿರುವ ಸದಾಶಿವ ದೇವರು. ಇಲ್ಲಿಯ ವಿಶೇಷವೆಂದರೆ ಇಲ್ಲಿ ವಿಷ್ಣು ಮತ್ತು ಶಿವ ಜೊತೆಯಾಗಿ ನೆಲೆ ನಿಂತಿದ್ದಾರೆ.


ಸಮುದ್ರಮಟ್ಟಕ್ಕಿಂತ ಸಾವಿರ ಅಡಿ ಎತ್ತರದಲ್ಲಿದೆ ಈ ನರಹರಿ ಪರ್ವತ. ಈ ದೇವಾಲಯವನ್ನು ನಾವು ನೋಡಬೇಕಾದರೆ 334 ಮೆಟ್ಟಿಲುಗಳನ್ನು ಏರಿ ನರಹರಿ ಬೆಟ್ಟವನ್ನು ತಲುಪಬೇಕು. ಈ ನರಹರಿ ಪರ್ವತದ ಸದಾಶಿವ ದೇವಸ್ಥಾನಕ್ಕೆ ದ್ವಾಪರಾಯುಗಷ್ಟು ಹಿಂದಿನ ಇತಿಹಾಸವಿದೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಕುರುಕ್ಷೇತ್ರ ಯುದ್ಧ ಮುಗಿದ ನಂತರ ಶ್ರೀ ಕೃಷ್ಣನು ಇಲ್ಲಿಗೆ ಬಂದು
ತನ್ನ ಆಯುಧಗಳಿಂದ ಚಿಕ್ಕ ಕೆರೆಗಳನ್ನು ಮಾಡಿದನೆಂಬ ಪ್ರತೀತಿ ಇದೆ . ಈ ಕೊಳಗಳ ಹೆಸರುಗಳೇ ಶಂಖ ತೀರ್ಥ, ಚಕ್ರತೀರ್ಥ, ಗದಾ ತೀರ್ಥ, ಪದ್ಮ ತೀರ್ಥ ಎಂದು . ಪಾಂಡವರು ಈ ಕೊಳಗಳಲ್ಲಿ ಮಿಂದು ತಮ್ಮ ಯುದ್ಧದ ಪಾಪಗಳನ್ನು ಪರಿಹಾರ ಮಾಡಿಕೊಂಡರು ಎಂದು ಸ್ಥಳಪು ರಾಣಗಳಲ್ಲಿ ಉಲ್ಲೇಖಿಸಲಾಗಿದೆ. ನರ ಮತ್ತು ಹರಿ ಇವರಿಂದ ಈ ಕ್ಷೇತ್ರ ಪಾವನವಾದದ್ದರಿಂದ ಈ ಕ್ಷೇತ್ರಕ್ಕೆ ನರಹರಿ ಪರ್ವತ ಎಂದು ಹೆಸರು ಬಂದಿದೆ . ಆಟಿ ಅಮಾವಾಸ್ಯೆ ,ಶ್ರಾವಣ ಅಮಾವಾಸ್ಯೆ , ಇಲ್ಲಿನ ತೀರ್ಥದಲ್ಲಿ ಮಿಂದು ಎದ್ದು ದೇವರ ದರುಶನ ಮಾಡಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬುದು ಭಕ್ತರ ಮಾತು . ಇದಕ್ಕೆ ಇಲ್ಲಿಗೆ ಬರುವಂತಹ ಸಾವಿರಾರು ಭಕ್ತರೇ ಸಾಕ್ಷಿ.

ನಾರಿನಿಂದ ಮಾಡಿದ ಹಗ್ಗವನ್ನು ಸಮರ್ಪಣೆ ಹರಕೆ ರೂಪದಲ್ಲಿ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಜನರ ನಂಬಿಕೆ. ಇಲ್ಲಿ ಬಾಲಿವಾಡು ಅರ್ಪಿಸುವುದರಿಂದ ಸರ್ವ ಭಯ ನಿವಾರಣೆ, ಪಾರ್ಶರ್ಪಣೆಯಿಂದ ಅಸ್ತಮಾ ವ್ಯಾಧಿ , ತೊಟ್ಟಿಲು ಸೇವೆಯಿಂದ ಸಂತಾನ ಭಾಗ್ಯ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬುದು ಜನರ ನಂಬಿಕೆ . ಹಚ್ಚಹಸಿರಿನ ಪರಿಸರದ ಮಧ್ಯದಲ್ಲಿರುವ

ಈ ದೇವಸ್ಥಾನ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಹರಿ ಪರ್ವತ ಬೆಟ್ಟದ ಮೇಲೆ. ಮಂಗಳೂರಿನಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿದೆ ಈ ನರಹರಿ ಬೆಟ್ಟ .ಅರ್ಜುನನ್ನು ಇಲ್ಲಿ ಇದ್ದ ಶಿಲೆಯಿಂದ ಸದಾಶಿವ ದೇವರನ್ನು ಪ್ರತಿಷ್ಠಾಪಿಸಿದ ಎಂಬುದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ರಮಣೀಯ ಪರಿಸರದ ಮಧ್ಯ ಇರುವ ಈ ದೇವಾಲಯವನ್ನು ಪ್ರತಿಯೊಬ್ಬರು ಒಂದು ಸಲವಾದರೂ ಭೇಟಿ ಮಾಡಲೇಬೇಕು 

ಪ್ರದೀಪ್‌ ,ಚಿನ್ಮಯಿ ಆಸ್ಪತ್ರೆ

   

Related Articles

error: Content is protected !!