222
ಸಾಗರದ ಸಹಕಾರಿ ಧುರೀಣ ಮಾಜಿ ಶಾಸಕ
ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ
ಕುಂದಾಪುರ;ಸಾಗರ ಕ್ಷೇತ್ರದ ಮಾಜಿ ಶಾಸಕ ಸಹಕಾರಿ ಧುರೀಣ ಎಲ್ ಟಿ ತಿಮ್ಮಪ್ಪ ಹೆಗಡೆ
ಇವರು ತನ್ನ ಸ್ವಗ್ರಾಮವಾದ ಮಡಸೂರಿನ ಕಾನುಕೊಪ್ಪದಲ್ಲಿ ನಿಧನರಾದರು
1978-1983 ರ ಅವಧಿಯಲ್ಲಿ ಸಾಗರದಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ
ಆಯ್ಕೆಯಾಗಿದ್ದರು ಅಡಕೆ ಬೆಳೆಗಾರರ ಸಂಘಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದ
ಇವರು ಕ್ಯಾಂಪ್ಕೋದ ಸಂಸ್ಥಾಪಕ ನಿರ್ಧೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು
ಕುಂದಾಪುರದ ಹಟ್ಟಿಯಂಗಡಿಯ ಸಿಧ್ಧಿವಿನಾಯಕ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಹಾಗೂ
ಶ್ರೀ ಸಿಧ್ಧಿ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿದ್ದರು ಇವರ ನಿಧನಕ್ಕೆ
ಶ್ರೀ ಸಿಧ್ಧಿ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ಬಾಲಚಂದ್ರ ಭಟ್ ಹಾಗೂ ಶರಣ್ ಭಟ್ ರವರು
ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ

