Home » ವಿವಾಹ ಮೆರವಣಿಗೆಯಲ್ಲಿ ನೋಟುಗಳ ಸುರಿಮಳೆ
 

ವಿವಾಹ ಮೆರವಣಿಗೆಯಲ್ಲಿ ನೋಟುಗಳ ಸುರಿಮಳೆ

by Kundapur Xpress
Spread the love

ಲಖನೌ : ಮದುವೆ ದಿಬ್ಬಣದ ಮೇಲೆ ಹೂಗಳನ್ನು ಸುರಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಮದುವೆ ಮೆರವಣಿಗೆ ವೇಳೆ ಬರೋಬರಿ 20 ಲಕ್ಷ ರೂ.ಗಳನ್ನೇ ಸುರಿದು, ಹಣದ ಸುರಿಮಳೆಯನ್ನೇ ಹರಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ವಧು-ವರ ಮೆರವಣಿಗೆಯಲ್ಲಿ ಹೋಗುತ್ತಿರುವ ವೇಳೆ ವರನ ಕು ಟುಂಬಸ್ಥರು ಮಹಡಿ ಮತ್ತು ಜೆಸಿಬಿ ಮೇಲಿನಿಂದ 100, 200, 500 ರೂಗಳ ನೋಟನ್ನು ಮಳೆಯಂತೆ ಮೇಲಿನಿಂದ ಎಸೆದಿದ್ದಾರೆ. ಮೂಲಗಳ ಪ್ರ ಕಾರ ವರನ ಕುಟುಂಬ 20 ಲಕ್ಷ ರೂ. ಗಳನ್ನು ಈ ರೀತಿ ಎಸೆದಿದ್ದಾರೆ.

ಉತ್ತರ ಪ್ರದೇಶದ ದೇವಲವಾ ಗ್ರಾಮದಲ್ಲಿ ಅಬ್ಬಲ್ ಮತ್ತು, ಅಮ್ರನ್ ಜೋಡಿ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇದು ನಡೆದಿದೆ. ಈ ನೋಟುಗಳನ್ನು ಗ್ರಾಮ ನಿವಾಸಿಗಳು ತಾನು ಮುಂದು ತಾನು ಮುಂದು ಎಂಬಂತೆ ಸಂಗ್ರಹಿಸಿ ಕೊಂಡಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊರ ಹಾಕುತಿದ್ದಾರೆ. ಒಂದೆಡೆ ಈ ರೀತಿ ಹಣವನ್ನು ದುರ್ಬಳಕೆ ಮಾಡುವ ಬದಲು ಅವಶ್ಯಕತೆ ಇರುವವರಿಗೆ ದಾನ ನೀಡಬಹುದು ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು ಕೆಲವರು, ಈ ದುಡ್ಡಲ್ಲಿ ನಾಲ್ಕು ಬಡ ಹೆಣ್ಣು ಮಕ್ಕಳ ವಿವಾಹ ನಡೆಸಬಹುದಿತ್ತು ಎಂದು ಹೇಳಿದ್ದಾರೆ.

   

Related Articles

error: Content is protected !!