Home » ಐಷಾರಾಮಿ ಕಾರು ಖರೀದಿಸಿದ ರಿಷಭ್‌ ಶೆಟ್ಟಿ
 

ಐಷಾರಾಮಿ ಕಾರು ಖರೀದಿಸಿದ ರಿಷಭ್‌ ಶೆಟ್ಟಿ

by Kundapur Xpress
Spread the love

ಬೆಂಗಳೂರು : ಟೊಯೇಟಾ ವೆಲ್‌ಫೈರ್ ಎಂಬ ಐಷಾರಾಮಿ ಕಾರು ಈಗ ಎಲ್ಲಾ ಸ್ಟಾರ್‌ ನಟರ  ಫೇವರಿಟ್ ಕಾರ್‌ ಆಗಿದೆ. ಈಗಾಗಲೇ ಕಿಚ್ಚ ಸುದೀಪ್, ಧನಂಜಯ ವೆಲ್‌ಫೈರ್ ಕಾರು ಹೊಂದಿದ್ದಾರೆ. ಇದೀಗ ಸುಮಾರು ಒಂದೂವರೆ ಕೋಟಿ ರೂಪಾಯಿ ಬೆಲೆಯ ಈ ಐಷಾರಾಮಿ ಕಾರನ್ನು ರಿಷಬ್ ಶೆಟ್ಟಿ ಖರೀದಿಸಿದ್ದಾರೆ.

‘ಕಾಂತಾರ ಚಾಪ್ಟರ್ 1 ಶೂಟಿಂಗ್ ಭರದಿಂದ ಸಾಗುತ್ತಿದೆ. ಮಳೆಯಿಂದ ಹಲವು ಬಾರಿ ಚಿತ್ರೀಕರಣ ಪೋಸ್ಟ್‌ಫೋನ್ ಆದರೂ ಅ. 2ರಂದು ಸಿನಿಮಾ ಬಿಡುಗಡೆ ಮಾಡಲೇಬೇಕೆಂದು ನಿರ್ಧಾರ ಮಾಡಿರುವ ಚಿತ್ರತಂಡ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ನಿರತವಾಗಿದೆ. ಈ ಮಧ್ಯೆಯೇ ರಿಷಬ್ ಶೆಟ್ಟಿ ಕಾರು ಖರೀದಿ ಮಾಡಿದ್ದಾರೆ. ರಿಷಬ್ ಶೆಟ್ಟಿ ತನ್ನ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳಾದ ರಣಿತ್ ಮತ್ತು ರಾಧ್ಯಾ ಜೊತೆಗೆ ವೆಲ್‌ಫೈರ್ ಖರೀದಿ ಸಂಭ್ರಮದಲ್ಲಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

 

Related Articles

error: Content is protected !!