Home » ಪಾಕ್‌ನ್ನು ಸದೆಬಡಿದ ಭಾರತ
 

ಪಾಕ್‌ನ್ನು ಸದೆಬಡಿದ ಭಾರತ

ಕೊಹ್ಲಿ ಅರ್ಭಟ : 111 ಬಾಲಿನಲ್ಲಿ 100

by Kundapur Xpress
Spread the love

ದುಬೈ : ಇಷ್ಟು ದಿನ ಲಯಕ್ಕಾಗಿ ಪರದಾಟ ನಡೆಸಿದ್ದ ಕೊಹ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರಾಗುತ್ತಿದ್ದಂತೆ ತಮ್ಮ ನಿಜವಾದ ರೂಪಕ್ಕೆ ಬಂದಿದ್ದು ಚಾಂಪಿಯನ್ಸ್ ಟ್ರೋಪಿ ಪಂದ್ಯಾವಳಿಯ ಪಂದ್ಯವನ್ನು ಗೆಲ್ಲಿಸಿದ್ದಾರೆ. ಅವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ಪಾಕ್ ತಂಡವನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ ಹೊರ ನೂಕಿದ್ದಾರೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ ಗೆ ಆಲೌಟ್ ಆಯಿತು. ಈ ಬಳಿಕ ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಗುರಿ ಬೆನ್ನತ್ತಿದ ಭಾರತಕ್ಕೆ ಅಬ್ಬರದ ಆರಂಭ ಸಿಕ್ಕಿತು. ನಾಯಕ ರೋಹಿತ್ ಶರ್ಮ ಆರಂಭದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದರು. ಅವರೊಂದಿಗೆ ಜತೆಗೂಡಿದ ಗಿಲ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿದರು. 20 ರನ್ ಗಳಿಸಿದ ರೋಹಿತ್ ವಿಕೆಟ್ ಒಪ್ಪಿಸಿದರು. ಗಿಲ್ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ 46 ರನ್ ಗಳಿಸಿದರು. ಅಯ್ಯರ್ ಹಾಗೂ  ಕೊಹ್ಲಿ ಅಬ್ಬರದ ಆಟಕ್ಕೆ ತವರಿನಲ್ಲಿ ಟ್ರೋಫಿ ಗೆಲ್ಲುವ ಪಾಕ್‌ ಕನಸು ನುಚ್ಚುನೂರಾಯಿತು

 

Related Articles

error: Content is protected !!