ಬೈಂದೂರು : ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುವರಿ ಗ್ರಾಮದ ಹೊತ್ತಿನ ಹಣೆ ಎನ್ ಹೆಚ್ 66 ರಸ್ತೆ ಎಂಬಲ್ಲಿ ಕಾರ್ ರಸ್ತೆಯ ಮೇಲೆ ಮಗುಚಿ ಬಿದ್ದ ಬಗ್ಗೆ ದೂರು ನೀಡಿದ್ದು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ ಚಾಲಕನಾದ ಗೌತಮ್ ಇವರನ್ನು ವಿಚಾರಿಸಿದಾಗ ಕೊಲ್ಲೂರಿನಿಂದ ಮುರುಡೇಶ್ವರಕ್ಕೆ ಪ್ರವಾಸ ಮಾಡುತ್ತಿರುವಾಗ ಬೈಂದೂರು ವತ್ತಿನಣೆ ಬಳಿ ವಾಹನ ಚಾಲನೆ ನಿಯಂತ್ರಣ ತಪ್ಪಿದ ಪರಿಣಾಮ ತಮ್ಮ ವಾಹನದ ಸಂಖ್ಯೆ TN 02 BU 9203 ನೇದನ್ನು ಒಮ್ಮೆಲೆ ಬ್ರೇಕ್ ಹಾಕಿದಾಗ ಎಡಬಾಗದ ರಸ್ತೆಯ ಮೇಲೆ ಮಗುಚಿ ಬಿದ್ದ ಪರಿಣಾಮ ತಮ್ಮ ವಾಹನವು ಸಂಪೂರ್ಣ ಜಖಂ ಗೊಂಡಿರುತ್ತದೆ ಎಂದರು.
ವಾಹನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಯಾವುದೇ ಗಾಯ ನೋವು ಉಂಟಾಗಿದಿರುವುದಿಲ್ಲ ಇದರಲ್ಲಿನಾ ಚಾಲಕನಿಗೆ ಬಲ ಕೈಗೆ ನೋವು ಉಂಟಾಗಿರುತ್ತದೆ ಅವರನ್ನು ಬೈಂದೂರು 108 ಅಂಬಿುಲೆನ್ಸ್ ಮೂಲಕ ಪ್ರಾಥಮಿಕ ಚಿಕಿತ್ಸೆ ಗೆ ಕಳಿಸಿಕೊಡಲಾಗಿದೆ ಕಾರನ್ನು ಘಟನಾ ಸ್ಥಳದ ಎಡಭಾಗದ ಸುರಕ್ಷತೆಯಲ್ಲಿ ಇಡಲಾಗಿ ಸ್ಥಳದಲ್ಲಿ ಓಡಾಡುವ ವಾಹನಗಳಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಈ ಬಗ್ಗೆ ದೂರು ನೀಡುವುದಾದರೆ ಬೈಂದೂರು ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದು ಸದ್ರಿ ವಿಚಾರವನ್ನು ಬೈಂದೂರು ಠಾಣೆ SHO HC 2197 ಯೋಗೇಶ ರವರಿಗೆ ತಿಳಿಸಿ ಈ ದೂರನ್ನು ಮುಕ್ತಾಯಗೊಳಿಸಿರುತ್ತಾರೆ.

