124
ಬೆಂಗಳೂರು : ದಿಲ್ಲಿ, ಬೆಂಗಳೂರು ಮತ್ತು ಮುಂಬೈ ನಗರಗಳಲ್ಲಿ 100ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ದಿಲ್ಲಿಯಲ್ಲಿ 45 ಶಾಲೆ ಮತ್ತು ಮೂರು ಕಾಲೇಜು, ಬೆಂಗಳೂರಿನಲ್ಲಿ 40 ಶಾಲೆ ಮತ್ತು ಮುಂಬೈನಲ್ಲಿ 3 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಬೆಂಗಳೂರಿನಲ್ಲಿ ಎಂ.ಎಸ್.ಧೋನಿ ಗ್ಲೋಬಲ್ ಸ್ಕೂಲ್ ಸೇರಿದಂತೆ, ಆರ್. ಆರ್. ನಗರ ಹಾಗೂ ಕೆಂಗೇರಿ ಭಾಗದ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಲಾಗಿದ್ದು, ಶಾಲೆಗಳ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

