Home ರಾಜ್ಯ ಸುದ್ದಿಇಂದು ಐ ಎಂ ಜಯರಾಮ ಶೆಟ್ಟಿ ಸಂಸ್ಮರಣಾ ದಿನಾಚರಣೆ

ಇಂದು ಐ ಎಂ ಜಯರಾಮ ಶೆಟ್ಟಿ ಸಂಸ್ಮರಣಾ ದಿನಾಚರಣೆ

by Kundapur Xpress

ಕುಂದಾಪುರ : ರಾಜ್ಯದಲ್ಲೇ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದ ಮಾಜಿ ಶಾಸಕ ಹಾಗೂ ಮಾಜಿ ಸಂಸದ ಮತ್ತು ಐ.ಎಂ. ಜೆ. ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿ. ಐ.ಎಂ. ಜಯರಾಮ ಶೆಟ್ಟಿಯವರ ಸಂಸ್ಮರಣಾ ದಿನಾಚರಣೆಯು ಇಂದು ಬೆಳಗ್ಗೆ 10.00 ಗಂಟೆಗೆ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಲಿದೆ

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸಮಾರಂಭವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಬ್ಯಾಂಕಿನ ಮಾಜಿ ನಿರ್ದೇಶಕ ಡಾ. ರಾಮಮೋಹನ್ ಉಡುಪಿ ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಐಎಂಜೆ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ ಮೆನ್ ಸಿದ್ದಾರ್ಥ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸನ್ಮಾನ ಕಾರ್ಯಕ್ರಮ

ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮುಳುಗು ತಜ್ಞ  ಈಶ್ವರ್ ಮಲ್ಪೆ ಮತ್ತು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಭಾಸ್ಕರ ಕಾಮತ್ ಅವರಿಗೆ ಸಮ್ಮಾನ ನಡೆಯಲಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

Related Articles