137
ತುಮಕೂರು :ಮನೆಯೊಳಗೆ ಕಾಣಿಸಿಕೊಂಡ ನಾಗರಹಾವನ್ನು ವೃದ್ಧೆಯೊಬ್ಬರು ಬರೀಗೈಯಲ್ಲಿ ಹಿಡಿದು ಹೆಗಲ ಮೇಲೆ ಹಾಕಿಕೊಂಡ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗುಲಿ ಬೆಟ್ಟದ ಮನೆಯಲ್ಲಿ ನಡೆದಿದೆ. ಆಕೆಯ ಮನೆಯೊಳಗೆ ನಾಗರಹಾವು ಕಾಣಿಸಿಕೊಂಡಿದ್ದು ಹಾವನ್ನು ಸೆರೆ ಹಿಡಿಯಲು ಜನ ದೊಣ್ಣೆ ಹುಡುಕುತ್ತಿದ್ದರು. ಆಗ ಮನೆಯೊಳಗೆ ಬಂದ ವೃದ್ಧೆ ಬರೀಗೈಯಲ್ಲಿ ಹಾವನ್ನು ಹಿಡಿದು ಹೆಗಲ ಮೇಲೆ ಹಾಕಿಕೊಂಡು ಹೊರಗಡೆ ಬಂದಿದ್ದಾರೆ. ಮನೆ ಹೊರಗಡೆ ಸೇರಿದ್ದ ಜನರು ವೃದ್ದೆಯನ್ನು ಕಂಡು ಬೆರಗಾಗಿದ್ದಾರೆ.

