Home » ಉಚಿತ ತಪಾಸಣಾ ಶಿಬಿರ
 

ಉಚಿತ ತಪಾಸಣಾ ಶಿಬಿರ

by Kundapur Xpress
Spread the love

ಮೂತ್ರಪಿಂಡ ತಪಾಸಣಾ ಶಿಬಿರ

ಕುಂದಾಪುರ : ಕುಂದಾಪುರ ನಗರದ ಚರ್ಚ್‌ ರಸ್ತೆಯಲ್ಲಿರುವ ಚಿನ್ಮಯಿ ಆಸ್ಪತ್ರೆಯಲ್ಲಿ ಉಚಿತ ಮೂತ್ರಪಿಂಡ ತಪಾಸಣಾ ಶಿಬಿರ ನಡೆಯಿತು

ಚಿನ್ಮಯಿ ಆಸ್ಪತ್ರೆ ಹಾಗೂ ರೋಟರಿ ಕುಂದಾಪುರ ದಕ್ಷಿಣ ಇವರ ಸಹಭಾಗಿತ್ವದಲ್ಲಿ ನಡೆದ ಉಚಿತ ಮೂತ್ರಪಿಂಡ ತಪಾಸಣಾ ಶಿಬಿರದಲ್ಲಿ ಮಂಗಳೂರಿನ ಖ್ಯಾತ ವೈದ್ಯರಾದ  ಡಾ.ಸಂತೋಷ್‌ ಪೈಯವರ ನೇತೃತ್ವದಲ್ಲಿ ತಪಾಸಣೆ ನಡೆಯಿತು  ಶಿಬಿರದಲ್ಲಿ ರಕ್ತ ಪರೀಕ್ಷೆ ವೈದ್ಯಕೀಯ ತಪಾಸಣೆಗಳಲ್ಲದೇ ಮೂತ್ರಪಿಂಡ ತಪಾಸಣೆಗಾಗಿ ಆಗಮಿಸಿದವರಿಗೆ ವಿವಿಧ ರೀತಿಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು

ಸುಮಾರು 40 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು ಈ ಸಂದರ್ಭದಲ್ಲಿ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ಧೇಶಕರಾದ ಉಮೇಶ್‌ ಪುತ್ರನ್‌ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷರಾದ ಸತ್ಯನಾರಾಯಣ ಪುರಾಣಿಕ್‌ ಹಾಗೂ ರೋಟರಿ ಸದಸ್ಯರು ಮತ್ತು ಚಿನ್ಮಯಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು   

   

Related Articles

error: Content is protected !!