ಮೂಡ್ಲಕಟ್ಟೆ ಎಂ ಐ ಟಿ: ರ‍್ಯಾಗಿಂಗ್ ವಿರೋಧಿ ಸಪ್ತಾಹ
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಂಟಿ ರ‍್ಯಾಗಿಂಗ್ ಸೆಲ್ ವತಿಯಿಂದ ರ‍್ಯಾಗಿಂಗ್ ವಿರೋಧಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಜನಪ್ರಿಯ ವಕೀಲರಾಗಿರುವ ಶ್ರೀಯುತ ರೋ. ರಾಘವೇಂದ್ರ ನಾವುಡ ಇವರು ಆಗಮಿಸಿದ್ದರು. ಏಮ್ ಐ ಟಿ ಕಾಲೇಜು ರ‍್ಯಾಗಿಂಗ್ ಮುಕ್ತ ಸಂಸ್ಥೆಯಾಗಿದ್ದರೂ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ಜೊತೆಗೆ ರ‍್ಯಾಗಿಂಗ್ ಮಾಡುವುದರಿಂದ ಆಗುವ ಎಲ್ಲ ತರಹದ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳನ್ನು ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿನಿ ಖುಷಿ ಕಾರ್ಯಕ್ರಮ ನಿರೂಪಿಸಿದರು. ರ‍್ಯಾಗಿಂಗ್ –ವಿರೋಧಿ ಕ್ರಮಗಳ ಮೇಲೆ ಕೇಂದ್ರೀಕರಿಸಿದ ಪ್ರಬಂಧ–ಬರಹ, ಪೋಸ್ಟರ್ ತಯಾರಿಕೆ ಮತ್ತು ಲೋಗೋ ವಿನ್ಯಾಸದಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರ‍್ಯಾಗಿಂಗ್ ವಿರೋಧಿ ಸಪ್ತಾಹದ ಕೊನೆಯ ದಿನ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.