Home Uncategorizedಉಚಿತ ನೇತ್ರ ಪರೀಕ್ಷೆ

ಉಚಿತ ನೇತ್ರ ಪರೀಕ್ಷೆ

by Kundapur Xpress

ಮಂಗಳೂರು: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆಯು ಡಿ. 17 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.00  ಗಂಟೆಯವರೆಗೆ ನಗರದ ಪಂಪ್‌ವೆಲ್ ಬಳಿಯ ಉಜೋಡಿಯ ಪ್ರಸಾದ್‌ ನೇತ್ರಾಲಯದಲ್ಲಿ ನಡೆಯಲಿದೆ.

ಕಣ್ಣಿಗೆ ಸಂಬಂಧಿಸಿದ ಲಾಸಿಕ್ – ಸ್ಟೈಲ್ ಮತ್ತು ಪಿಆರ್ ಕೆ ಲೇಸರ್ ಕಣ್ಣಿನ ತಪಾಸಣೆ ನಡೆಯಲಿದೆ. 18 ವರ್ಷದಿಂದ 50 ವರ್ಷದವರಿಗೆ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್‌ ಲೆನ್ಸ್ ನಿಂದ ಮುಕ್ತಿ ಹೊಂದಬಹುದಾಗಿದೆ. ಯಾವುದೇ ನೋವು ಈ ಚಿಕಿತ್ಸೆಯಿಂದ ಉಂಟಾಗುವುದಿಲ್ಲ, ವಿಶೇಷ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡ ಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಚಿಕಿತ್ಸೆ ನಡೆಸಲಾಗುವುದು, ದೃಷ್ಟಿ ಪರೀಕ್ಷೆ ಕಣ್ಣಿನ ನರ ಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್ ಮೊದಲಾದ ಸೌಲಭ್ಯ ಉಚಿತವಾಗಿ ಒದಗಿಸ ಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ

Related Articles