Home » ತ್ರಾಸಿ ಬೀಚ್ ಬಳಿ ಭೀಕರ ಅಫಘಾತ : ನಿಂತ ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ
 

ತ್ರಾಸಿ ಬೀಚ್ ಬಳಿ ಭೀಕರ ಅಫಘಾತ : ನಿಂತ ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ

by Kundapur Xpress
Spread the love

ಕುಂದಾಪುರ : ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಮಧ್ಯಾಹ್ನ‌ ಸಂಭವಿಸಿದ ಬಸ್ಸು ಹಾಗೂ ಲಾರಿಗಳ ಢಿಕ್ಕಿಯಲ್ಲಿ ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ನಡೆದಿದೆ.

ಬಸ್ಸಿನಲ್ಲಿ ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾನಿಲಯದ ಜಗದ್ಗುರು ರಂಭಾಪುರಿ ಕಲಾ & ವಾಣಿಜ್ಯ ಕಾಲೇಜಿನ‌ ವಿದ್ಯಾರ್ಥಿಗಳು ಹಾಗೂ‌ ಇತರರು‌ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಎಚ್ ಡಿ‌ ಕುಲಕರ್ಣಿ, ಪಿಎಸ್ಐ ಪವನ್‌ ನಾಯ್ಕ್ ಭೇಟಿ‌ ನೀಡಿದ್ದಾರೆ

 

Related Articles

error: Content is protected !!