Home » ವೃದ್ಥೆಯ ಮೇಲೆ ದೌರ್ಜನ್ಯ : ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
 

ವೃದ್ಥೆಯ ಮೇಲೆ ದೌರ್ಜನ್ಯ : ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

by Kundapur Xpress
Spread the love

ಕೊಲ್ಲೂರು: ಮನೆಗೆ ಬರುವ ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ನಿಲ್ಲಿಸಿ ತೊಂದರೆ ನೀಡಿದ್ದಲ್ಲದೆ, ಅಕ್ರಮವಾಗಿ ಮನೆಗೆ ನುಗ್ಗಿ ನಿಂದಿಸಿ, ಗೇಟ್‌ಗೆ ಬೀಗ ಹಾಕಿ ದೌರ್ಜನ್ಯ ಎಸಗಿದ ಘಟನೆ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಸಂದೇಶ್ ಪ್ರಭು ಎಂಬಾತನ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಡ್ಕಲ್ ಗ್ರಾಮದ ನಿವಾಸಿ ಜ್ಯೋತಿ ಪ್ರಭು (74) ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ಏಪ್ರಿಲ್ 12ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ಸಂದೇಶ್ ಪ್ರಭು ಎಂಬಾತನು, ಜ್ಯೋತಿ ಪ್ರಭು ಅವರ ಮನೆಗೆ ಬರುವ ರಸ್ತೆಯಲ್ಲಿ ತನ್ನ ಕಾರನ್ನು ಉದ್ದೇಶಪೂರ್ವಕವಾಗಿ ಅಡ್ಡಗಟ್ಟಿ ನಿಲ್ಲಿಸಿದ್ದನು. ಇದನ್ನು ಪ್ರಶ್ನಿಸಿದಾಗ, ಅಕ್ರಮವಾಗಿ ಮನೆಯ ಅಂಗಳಕ್ಕೆ ನುಗ್ಗಿ ಜ್ಯೋತಿ ಅವರ ಮಗ ಮಿಥುನ್ ಪ್ರಭು ಅವರಿಗೆ ಅಶ್ಲೀಲ ಪದಗಳಿಂದ ಬೈದು ದರ್ಪ ತೋರಿದ್ದಾನೆ.

ಅದೇ ದಿನ ಸಂಜೆ ಸುಮಾರು 7:00 ಗಂಟೆಯ ವೇಳೆಗೆ ಮತ್ತೆ ಬಂದ ಆರೋಪಿ, ರಸ್ತೆಯಲ್ಲಿದ್ದ ತನ್ನ ಕಾರನ್ನು ಮನೆಯ ಬಳಿ ಅತಿ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿ ದೂಳೆಬ್ಬಿಸಿ ಕಿರಿಕಿರಿ ಉಂಟುಮಾಡಿದ್ದಾನೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮತ್ತೆ ಅಂಗಳಕ್ಕೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಮನೆಗೆ ಬರುವ ದಾರಿಯಲ್ಲಿದ್ದ ಗೇಟ್‌ಗೆ ಬೀಗ ಜಡಿದು ಕುಟುಂಬದವರು ಓಡಾಟ ನಡೆಸದಂತೆ ತೊಂದರೆ ನೀಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ದೌರ್ಜನ್ಯದ ಬಗ್ಗೆ ಜ್ಯೋತಿ ಪ್ರಭು ಅವರು ನೀಡಿದ ದೂರಿನನ್ವಯ ಕೊಲ್ಲೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಸಂದೇಶ್ ಪ್ರಭು ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 329(3) ಹಾಗೂ 352 ರ ಅಡಿಯಲ್ಲಿ ಅಪರಾಧ ಕ್ರಮಾಂಕ 26/2026 ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

 

Related Articles

error: Content is protected !!