85
ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಎಸ್,ಸಿ ಮೋರ್ಚಾ ವತಿಯಿಂದ ಸೇವಾಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ನ ಕನ್ಯಾನ ಬಸ್ ಸ್ಟ್ಯಾಂಡ್ ಮತ್ತು, ಅಂಪಾರು ಗ್ರಾಮದ ವಾಲ್ತಾರು ಬಸ್ ಸ್ಟ್ಯಾಂಡ್, ಹಾಗೂ, ಮೂಡುಬಗೆ ಗ್ರಾಮದ, ಬಸ್ ಸ್ಟ್ಯಾಂಡ್ ನ ಸ್ವಚ್ಛತಾ ಕಾರ್ಯಕ್ರಮವನ್ನು ಎಸ್ಸಿ ಮೋರ್ಚಾ, ಅಧ್ಯಕ್ಷರಾದ, ಅಶೋಕ್, ಏನ್. ಡಿ. ಪ್ರಾ, ಕಾರ್ಯದರ್ಶಿ ಗಳಾದ, ಅಕ್ಷಯ್ ಮಂಕಿ, ಹಾಗೂ ಸಂತೋಷ ಮೊಡುಬಗೆ, ಯವರ, ನೇತ್ರತ್ವದಲ್ಲಿ ನಡೆಸಲಾಯಿತು
ಈ ಸಂದರ್ಭದಲ್ಲಿ ಕಾವ್ರಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಾಂತಿ ಸಾಗರ್ ಶೆಟ್ಟಿ. ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಚಂದ್ರ ಪಂಚವಟಿ ಹಾಗೂ ಬೈಂದೂರು ಮಂಡಲದ ಎಸ್ಸಿ ಮೋರ್ಚಾ ಕಾರ್ಯದರ್ಶಿ ರವಿರಾಜ್ ಮತ್ತು ಮಹೇಶ್.
ಗುಡ್ಡೆಅಂಗಡಿ ಬೂತ್ ಅಧ್ಯಕ್ಷರಾದ ಪ್ರವೀಣ್ ಮತ್ತು ಆ ಭಾಗದ ವಿವಿಧ ಸ್ತರದ ಜವಾಬ್ದಾರಿ ಹೊತ್ತ ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದಿದ್ದರು

