ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ, ಮಕ್ಕಳ ಕ್ಯಾನ್ಸರ್ ಜಾಗೃತಿಗಾಗಿ ಮುಂಬಯಿಯಿಂದ ಮಂಗಳೂರಿಗೆ ಮ್ಯಾರಥಾನ್ ಓಟ ನಡೆಸುತ್ತಿರುವ ರೇಷ್ಮಾ ಶೆಟ್ಟಿ ಮತ್ತು ಗಿರೀಶ್ ಶೆಟ್ಟಿ ದಂಪತಿಗಳಿಗೆ ಹಾಗೂ ಅವರ ತಂಡಕ್ಕೆ ಕುಂದಾಪುರದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ತಪಸ್ಯಾ ಫೌಂಡೇಶನ್ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಈ ದಂಪತಿಯ ಮಾನವೀಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಶಾಸ್ತ್ರಿ ವೃತ್ತದಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ತಂಡದ ಪದಾಧಿಕಾರಿಗಳು ಮತ್ತು ಸದಸ್ಯರು ದಂಪತಿಗಳಿಗೆ ಗೌರವ ಸಲ್ಲಿಸಿ, ಅವರ ಮುಂದಿನ ಯಾತ್ರೆಗೆ ಹಾರೈಸಿದರು. ಈ ಮಹತ್ವಾಕಾಂಕ್ಷಿ ಸೇವಾ ಯೋಜನೆಗೆ ಬೆಂಬಲ ನೀಡುವ ಸಲುವಾಗಿ, ತಪಸ್ಯಾ ಫೌಂಡೇಶನ್‌ಗೆ ಆರ್ಥಿಕ ಸಹಾಯ ಮಾಡುವ ನಿರ್ಧಾರವನ್ನು ಕೂಡಾ ನಮ್ಮ ಕ್ಲಬ್ ಕೈಗೊಂಡಿದೆ. ಈ ಸಹಾಯ ಧನ, ಕ್ಯಾನ್ಸರ್ ಪೀಡಿತ ಮಕ್ಕಳ ಉಚಿತ ಚಿಕಿತ್ಸೆಗೆ ಹಾಗೂ ಜಾಗೃತಿಗೆ ಸಹಕಾರಿಯಾಗಲಿದೆ.
ಸಮಾರಂಭದಲ್ಲಿ ಕ್ಲಬ್‌ನ ಪ್ರಮುಖರಾದ ಲಯನ್ ಜನನಿ ದಿನಕರ ಶೆಟ್ಟಿ ಲಯನ್ ಶ್ರೀಧರ ಮರವಂತೆ ಲಯನ್ ಜಗದೀಶ್ ಲಯನ್ ಕಿರಣ್ ಕುಂದಾಪುರಲಯನ್ ಮೊಹಮದ್ ಅಶ್ರಫ್, ಲಯನ್ ಪ್ರವೀಣ್ ಕುಮಾರ್ ಶೆಟ್ಟಿ ಲಯನ್ ಸುನೀಲ್ ಕುಮಾರ್ ಶೆಟ್ಟಿ, ಲಯನ್ ಸುಧಾಕರ ಪೂಜಾರಿ, ಲಯನ್ ಶಶಿರಾಜ್ ಮುಂತಾದವರು ಉಪಸ್ಥಿತರಿದ್ದರು

