331
ಕುಂದಾಪುರ : ನಾವುಂದ ಸಮೀಪದ ಬಡಾಕೆರೆಯ ನಿವಾಸಿ ಅಪ್ಪಟ ಸಂಘದ ಸ್ವಯಂಸೇವಕ ಮೃದು ಹಾಗೂ ಮಿತ ಭಾಷಿಯಾದ ನಾಗೇಶ್ ಶೇಟ್ ನಿನ್ನೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು
ಅವರು ರಾಷ್ಟ್ರೀಯ ಸ್ವಯಂಸೇವಾ ಸಂಘದ (RSS) ಬೈಂದೂರು ತಾಲೂಕಿನ ಕುಟುಂಬ ಪ್ರಮೋದನ್ ಸಂಯೋಜಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು ಬಡಾಕೆರೆ ಶ್ರೀರಾಮ ಭಜನಾ ಮಂಡಳಿಯ ಸ್ಥಾಪಕ ಸದಸ್ಯರಾಗಿ, ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಧರ್ಮರಕ್ಷಕರಾಗಿ ಸೇವೆ ಸಲ್ಲಿಸಿ ರಾಷ್ಟ್ರೀಯ ವಿಚಾರಧಾರೆಗಳ ಚಿಂತಕರಾಗಿ ಮಕ್ಕಳಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುತ್ತಿದ್ದರು
ರಾಷ್ಟ್ರ ಪ್ರೇಮಿ, ಧರ್ಮರಕ್ಷಕ ಬಡಾಕೆರೆ ನಾಗೇಶ್ ಶೇಟ್ ಅವರ ನಿಧನಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಹೊಳ್ಳ ಹಾಗೂ ಕುಟುಂಬ ಪ್ರಮೋದನ್ ಮುಖ್ಯಸ್ಥರಾದ ಗುರುರಾಜ್ ಮತ್ತು ಸ್ವರ್ಣಾನಂದ ಕುಂದಾಪುರ ಮುಂತಾದವರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ

