Home » ರಾಷ್ಟ್ರೀಯ ಹೆದ್ದಾರಿ-66ರ ಸೇತುವೆ ಮೇಲೆ ಲಾರಿ ಬೆಂಕಿಗಾಹುತಿ
 

ರಾಷ್ಟ್ರೀಯ ಹೆದ್ದಾರಿ-66ರ ಸೇತುವೆ ಮೇಲೆ ಲಾರಿ ಬೆಂಕಿಗಾಹುತಿ

by Kundapur Xpress
Spread the love

ಬೈಂದೂರು : ರಾಷ್ಟ್ರೀಯ ಹೆದ್ದಾರಿ-66ರ ಉಪ್ಪುಂದ – ಬಿಜೂರು ನಡುವಿನ ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಭೀಕರ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.

ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು, ಅಗ್ನಿ ಅವಘಡದಿಂದಾಗಿ ಲಾರಿ ಸಹಿತ ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಭಸ್ಮವಾಗಿದೆ.

ಲಾರಿಯು ಗುರುವಾರ ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಬೈಂದೂರಿನ ಯಡ್ತರೆ ಬೈಪಾಸ್ ದಾಟಿ ಬಿಜೂರು ಸಮೀಪದ ಸೇತುವೆ ಮೇಲೆ ಸಾಗುತ್ತಿತ್ತು. ಈ ವೇಳೆ ಲಾರಿಯ ಹಿಂಬದಿಯ ಟಯರ್ ಏಕಾಏಕಿ ಸ್ಫೋಟಗೊಂಡಿದೆ.

ಘರ್ಷಣೆಯ ರಭಸಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಲಾರಿಯ ಹಿಂಭಾಗಕ್ಕೆ ವ್ಯಾಪಿಸಿದೆ. ಲಾರಿ ಚಾಲಕ ಚಂದ್ರಕಾಂತ್ ಅವರು ತಕ್ಷಣವೇ ಎಚ್ಚೆತ್ತುಕೊಂಡು ಲಾರಿಯಿಂದ ಕೆಳಗಿಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೆದ್ದಾರಿಯ ಸೇತುವೆಯ ಮೇಲೆಯೇ ಲಾರಿ ಹೊತ್ತಿ ಉರಿಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಬೈಂದೂರು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಯಡ್ತರೆ ಜಂಕ್ಷನ್ ಬಳಿ ವಾಹನಗಳಿಗೆ ತಿರುವು ನೀಡಿ, ಹೆದ್ದಾರಿಯ ಇನ್ನೊಂದು ಪಥದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 

Related Articles

error: Content is protected !!