44
ಕೋಟೇಶ್ವರ :ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ ಕುಂದಾಪುರ ಇಲ್ಲಿಯ ವಿವಿಧ ಸಮಿತಿಗಳ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಇವರು ಏಕತಾ ದಿನದ ಮಹತ್ವ ಮತ್ತು ಆಚರಣೆಯ ಹಿನ್ನಲೆಯನ್ನು ವಿವರಿಸಿದರು. ದೇಶದಲ್ಲಿದ್ದ ವಿವಿಧ ಸಂಸ್ಥಾನಗಳನ್ನು ಭಾರತ ಸರ್ಕಾರದ ಪ್ರಜಾಪ್ರಭುತ್ವದ ಛತ್ರದ ಅಡಿಯಲ್ಲಿ ತರುವಲ್ಲಿ ಸದಾರ ವಲ್ಲಭ ಬಾಯ್ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಿದರು.
ರಾಷ್ಟ್ರೀಯ ಏಕತೆಯ ಜಾಗೃತ ಭಾವ ಇದ್ದಾಗ ಮಾತ್ರ ರಾಷ್ಟ್ರೀಯ ಏಕತೆ ಮತ್ತು ಅಖಂಡತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಮಾಹಿತರಾದ ಎಲ್ಲಾ ವಿದ್ಯಾರ್ಥಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಏಕತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು. ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಅವರು ಪ್ರತಿಜ್ಞಾ ನೆರವೇರಿಸಿದರು.

