ಕುಂದಾಪುರ : ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಕಮ್ಯೂನಿಟಿ ಸರ್ವಿಸ್ ಕ್ಲಬ್ ಮತ್ತು ಎಫ್.ಎಸ್.ಎಲ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಸ್ಕೃತಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಫ್ರಾನ್ಸ್ ವಿದ್ಯಾರ್ಥಿಗಳಿಂದ ವರ್ಕ್ ಕ್ಯಾಂಪ್ ಪ್ರೆಸೆಂಟೇಷನ್, ಗುಂಪು ಚರ್ಚೆ ಮತ್ತು ಅನೇಕ ಗ್ರೂಪ್ ಬಾಂಡಿಂಗ್ ಚಟುವಟಿಕೆಯನ್ನು ಐ.ಎಂ.ಜೆ ಪದವಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ‘ ವಾಯ್ಸ್ ಫೋರ್ ಚೇಂಜ್ – ಲೋಕಲ್ ಆಕ್ಷನ್ ವಿಷಯದ ಕುರಿತು ಪ್ರಸೆಂಟೇಶನ್ ಕಾರ್ಯಕ್ರಮ ಜರುಗಿತು
ಇದರಲ್ಲಿ ಅರಣ್ಯ ನಾಶ ಮತ್ತು ಪರಿಸರ ಸಂರಕ್ಷಣೆಯ ಕುರಿತು ಚರ್ಚಿಸಲಾಯಿತು . ಆಮೆ ಸಂತತಿ ನಶಿಸಿ ಹೋಗುತ್ತಿರುವುದು ಹಾಗೂ ಅದನ್ನು ನಾವು ಹೇಗೆ ಸಂರಕ್ಷಿಸಬೇಕು ವಿಷಯದ ಕುರಿತು ಸಾಕ್ಷಾ ಚಿತ್ರವನ್ನು ಪ್ರದರ್ಶಿಸಲಾಯಿತು ಮತ್ತು ಹಸಿರನ್ನು ಉಳಿಸುವ ಮತ್ತು ಬೆಳೆಸುವ ದ್ಯೇಯದೊಂದಿಗೆ ಫ್ರಾನ್ಸ್ ವಿದ್ಯಾರ್ಥಿಗಳಿಂದ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಎಫ್.ಎಸ್.ಎಲ್ ಇಂಡಿಯಾ ಡೆಪ್ಯೂಟಿ ಡೈರೆಕ್ಟರ್ ಶ್ರೀ ರಾಗ್ಲoಡ್ ದೇವದಾಸ್, ಫೆಸಿಲಿಟೇಟರ್ ಶ್ರೀ ದಿನೇಶ್ ಸಾರಂಗ, ಯೂಥ್ ಡೆವಲಪ್ಮೆಂಟ್ ಆಫೀಸರ್ ಕುಮಾರಿ ರಕ್ಷಾ ವಿ ಶೆಣೈ ಕೆ, ಮುಖ್ಯ ಸಂಯೋಜಕರಾದ ಶ್ರೀಮತಿ ನಾಗರತ್ನ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷೀಯ ಮಾತುಗಳನ್ನಾಡಿ ಶುಭ ಹಾರೈಸಿ ವಂದಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ವಾಣಿಜ್ಯ ಉಪನ್ಯಾಸಕಿಯಾದ ಶ್ರೀಮತಿ ಮಾಲತಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ದೃತಿ ನಿರೂಪಿಸಿದರು.

