ಕೋಟ : ರಥಬೀದಿ ಫ್ರೆಂಡ್ಸ್ ವಡ್ಡರ್ಸೆ ಇವರ ದಶಮಾನೋತ್ಸವ ಕಾರ್ಯಕ್ರಮ ಮಾ.19ರಂದು ವಡ್ಡರ್ಸೆ ರಥಬೀದಿಯಲ್ಲಿ ಜರಗಿತು.
ಕರ್ನಾಟಕ ರಾಜ್ಯ ಕೇಬಲ್ ಟಿ.ವಿ. ಅಸೋಸಿಯೇಷನ್ ಅಧ್ಯಕ್ಷ ವಿ.ಎನ್. ಪ್ಯಾಟ್ರಿಕ್ ರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಘ ಸಂಸ್ಥೆಗಳು ಊರಿನ ಗೌರವದ ಪ್ರತೀಕವಾಗಿದ್ದು ಜಾತ್ರೆ, ಸಾಂಸ್ಕೃತಿಕ ವಾತವರಣದ ಸಂದರ್ಭ ಇಂತಹ ಕಾರ‍್ಯಕ್ರಮಗಳನ್ನು ಆಯೋಜಿಸುವುದರಿಂದ ಹಬ್ಬ ಹರಿದಿನಗಳಿಗೆ ಇನ್ನಷ್ಟು ಮೆರಗು ಬರಲಿದೆ ಎಂದರು.
ಉದ್ಯಮಿ ಬನ್ನಾಡಿ ದಿನಕರ ಶೆಟ್ಟಿ ಮಾತನಾಡಿ, ಸಂಘ ಸಂಸ್ಥೆಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಅವರ ಚಟುವಟಿಕೆಗಳ ಮೂಲಕ ಗುರುತಿಸಬಹುದಾಗಿದೆ. ಅದೇ ರೀತಿ ರಥಬೀದಿ ಫ್ರೆಂಡ್ಸ್ ಸಂಘಟನೆ ಸಮಾಜದಲ್ಲಿ ಉತ್ತಮರನ್ನು ಗುರುತಿಸಿ ಗೌರವಿಸುವ ಮೂಲಕ ಇನ್ನಷ್ಟು ಸಂಘಟನೆಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಚಂದ್ರಶೇಖರ್ ಉಪಾಧ್ಯ, ಸುಬ್ರಹ್ಮಣ್ಯ ವೈದ್ಯ, ಎಂ.ಕೆ.ಶೆಟ್ಟಿ, ಯೋಗೀಶ್ ಕಾಂಚನ್, ದಿನಕರ ಪೂಜಾರಿ ಅವರಿಗೆ ವೀರಯೋಧ ಗೌರವಾರ್ಪಣೆ ಸಲ್ಲಿಸಲಾಯಿತು ಸಮಾಜಿಕ ರಂಗದಲ್ಲಿ ಸೇವೆ ಮಾಡಿದ ಡಾ.ಸುಧಾಕರ ಸಾಲಿಗ್ರಾಮ, ಈಶ್ವರ ಮಲ್ಪೆ, ಹಾಲಾಡಿ ಕೃಷ್ಣ ನಾಯ್ಕ್, ಶಿವಾನಂದ ನಾಯರಿ, ವೈಷ್ಣವಿ ಅಡಿಗ, ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ರಾಜು ಪೂಜಾರಿ ಉಪ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ರಾಜು ಪೂಜಾರಿ ಬನ್ನಾಡಿ ಮೊದಲಾದವರಿದ್ದರು.
ಸಂಘದ ಕಾರ್ಯದರ್ಶಿ ಸಚ್ಚಿದಾನಂದ ಅಡಿಗ ಸ್ವಾಗತಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಶೆಟ್ಟಿ, ಮಹೇಂದ್ರ ಪೂಜಾರಿ, ರಕ್ಷಾ ಸಚ್ಚಿದಾನಂದ ಅಡಿಗ, ಪದ್ಮನಾಭ ಆಚಾರ್, ಸತೀಶ್ ಪೂಜಾರಿ ಪಿ.ಡಿ.ಒ., ಪ್ರಕಾಶ್ ಆಚರ‍್ಯ, ನಾಗೇಂದ್ರ ಅಡಿಗ, ಸಚಿನ್ ಶೆಟ್ಟಿ, ಜ್ಯೋತಿ ಆಚರ‍್ಯ ಸಮ್ಮಾನಿತರನ್ನು ಪರಿಚಯಿಸಿದರು.ಅಥರ್ವ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಆಚಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ಅನಂತರ ಜಿಲ್ಲೆಯ ಆಯ್ದ ಸಂಗೀತ ತಂಡಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

