Home » ಸೇವಾಸಂಗಮದ ಮೂಲಕ ಸಂಸ್ಕಾರಭರಿತ ಶಿಕ್ಷಣ – ಸುಬ್ರಹ್ಮಣ್ಯ ಹೊಳ್ಳ
 

ಸೇವಾಸಂಗಮದ ಮೂಲಕ ಸಂಸ್ಕಾರಭರಿತ ಶಿಕ್ಷಣ – ಸುಬ್ರಹ್ಮಣ್ಯ ಹೊಳ್ಳ

ಸೇವಾಸಂಗಮ ಶಿಶುಮಂದಿರದಲ್ಲಿ ಸಾಮೂಹಿಕ ಹುಟ್ಟು ಹಬ್ಬ ,ಬೆಳದಿಂಗಳ ಊಟ ಕಾರ್ಯಕ್ರಮ

by Kundapur Xpress
Spread the love

ಕೋಟ : ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಂಸ್ಕಾರಭರಿತ ಶಿಕ್ಷಣ ಸಿಗಬೇಕು ಆ ಮೂಲಕ ಮಕ್ಕಳ ಭವಿಷ್ಯ ಸದೃಢವಾಗಿ ಬೆಳೆಯಲು ಸಾಧ್ಯ ಈ ದಿಸೆಯಲ್ಲಿ ಪೋಷಕರು ಮಕ್ಕಳ ಬಾಲ್ಯ ಶಿಕ್ಷಣವನ್ನು ಸೇವಾಸಂಗಮ ಶಿಶುಮಂದಿರದ ಮೂಲಕ ಶಿಕ್ಷಣ ಪ್ರಾರಂಭಿಸಿ ಎಂದು ಸೇವಾಸಂಗಮ ಶಿಶುಮಂದಿರದ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಸುಬ್ರಹ್ಮಣ್ಯ ಹೊಳ್ಳ ನುಡಿದರು
ಇತ್ತೀಚಿಗೆ ಕೋಟದ ಸೇವಾಸಂಗಮ ಶಿಶುಮಂದಿರದಲ್ಲಿ ಸಾಮೂಹಿಕ ಹುಟ್ಟುಹಬ್ಬ ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣದ ಮೂಲಕ ಕ್ರಾಂತಿಕಾರಿ ಕಾರ್ಯಗಳಲ್ಲದೆ ಮನೆಯಲ್ಲಿ ಭಜನೆ ಧಾರ್ಮಿಕ ಮೂಲತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದರು. ಮಕ್ಕಳಿಗೆ ಸಹಬಾಳ್ವೆಯಿಂದ ಬದುಕುವ ವಿಚಾರಗಳನ್ನು ನೀಡಬೇಕು, ಪ್ರಸ್ತುತ ಆಂಗ್ಲ ವ್ಯಾಮೂಹದಿಂದ ಮಕ್ಕಳನ್ನು ಸಂಸ್ಕಾರದಿಂದ ವಂಚಿತಗೊಳಿಸುತ್ತಿದ್ದಾರೆ ಇದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಇದರಿಂದ ಹೊರ ಬಂದು ಸಂಸ್ಕಾರಭರಿತ ಶಿಕ್ಷಣಕ್ಕೆ ಒತ್ತುನೀಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಸಂಗಮ ಶಿಶು ಮಂದಿರ ಕೋಟ ಇದರ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ
ವಹಿಸಿದ್ದರು
ಸೇವಾಸಂಗಮ ಶಿಶುಮಂದಿರದ ನೂತನ ಅಧ್ಯಕ್ಷ ಶ್ರೀಕಾಂತ್ ಶೆಣೈ ಸೇವಾ ಸಂಗಮ ಶಿಶುಮಂದಿರದಲ್ಲಿ ಪ್ರಾರಂಭಿಕ ಅರ್ಥಪೂರ್ಣ ಶಿಕ್ಷಣ ನೀಡಿ ಆ ಮೂಲಕ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಕಲಾವತಿ ಅಶೋಕ್ ನಿರೂಪಿಸಿದರು. ಸೇವಾಸಂಗಮ ಶಿಶುಮಂದಿರದ ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ವಂದಿಸಿದರು.ಇದೇ ವೇಳೆ ಇತ್ತೀಚಿಗೆ ನಿಧನರಾದ ಶಿಶು ಮಂದಿರದ ಗೌರವಾಧ್ಯಕ್ಷ ನಾರಾಯಣ ಮಯ್ಯ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ನಂತರ ಸಾಮೂಹಿಕ ಹುಟ್ಟುಹಬ್ಬ ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮ ಜರಗಿತು.ಬಾಲಗೋಕುಲ ಹಾಗೂ ಶಿಶುಮಂದಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

 

Related Articles

error: Content is protected !!