237
ಉಡುಪಿ : ಇತ್ತೀಚೆಗೆ ಬೆಂಗಳೂರಿನಲ್ಲಿ 5 ಜನ ಭಯೋತ್ಪಾದಕರನ್ನು ಬಂಧಿಸಲಾಗಿದ್ದು ಇವರು ಲಷ್ಕರ್ – ಇ – ತೊಯ್ಬಾ ಸಂಘಟನೆಯೊಂದಿಗೆ ನಂಟು ಹೊಂದಿರುವುದರಿಂದ ಈ ಭಯೋತ್ಪಾದಕರ ಬಂಧನದ ತನಿಖೆಯನ್ನು NIA (ರಾಷ್ಟ್ರೀಯ ತನಿಖಾ ದಳ) ವಹಿಸುವಂತೆ ಮಾನ್ಯ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಷಾ ಅವರಿಗೆ ಸಚಿವೆಯಾದ ಶೋಭಾ ಕರಂದ್ಲಾಜೆಯವರು ಪತ್ರ ಮುಖೇನ ಮನವಿ ಮಾಡಿದ್ದಾರೆ
ಪ್ರಸ್ತುತ ಅಪರಾಧಿಗಳ ಹಿನ್ನಲೆ ಸಹಿತ ಮೂಲಭೂತವಾದಿಗಳನ್ನು ಮಟ್ಟ ಹಾಕಲು ಹಾಗೂ ಇವರ ಸಂಪೂರ್ಣ ಜಾಲವನ್ನು ಸದೆಬಡಿಯಲು NIA ತನಿಖೆಯ ಅಗತ್ಯತೆ ಇದೆ ಎಂದು ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ

