Home » ಮಂಗಳೂರಿನ ತ್ರಿಶಾ ಕಾಲೇಜು ವಾರ್ಷಿಕೋತ್ಸವ
 

ಮಂಗಳೂರಿನ ತ್ರಿಶಾ ಕಾಲೇಜು ವಾರ್ಷಿಕೋತ್ಸವ

by Kundapur Xpress
Spread the love

ಮಂಗಳೂರು : ತ್ರಿಶಾ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಮ್ಯಾನೆಜ್‌ಮೆಂಟ್‌ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್‌ ವಾರ್ಷಿಕೋತ್ಸವವು ಡಾನ್‌ ಬೊಸ್ಕೊ ಹಾಲ್‌ ಬಲ್ಮಠದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾನಂದಾಜಿಯವರು ವಿದ್ಯಾಥಿಗಳ ಬುದ್ಧಿಮತೆಯನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಜ್ಞಾನವನ್ನು ಶುದ್ಧಿಕರಿಸಬೇಕು ಹಾಗೂ ಸರಿಯಾದ ದಿಕ್ಕಿನಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು. ಗೌರವ ಅತಿಥಿಯಾಗಿ ಆಗಮಿಸಿದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ನಾರಾಯಣ ಕಾಯರ್‌ಕಟ್ಟೆ ವಿದ್ಯಾರ್ಥಿಗಳ ಸಾಧನೆಗಳನ್ನು ಹೇಳಿ, ಅವರನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್‌ವಹಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರನ್ನು ಹಾರೈಸಿದರು. ತ್ರಿಶಾ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲರು ಮಂಜುನಾಥ ಎಂ ಕಾಮಥ್‌ ಅವರು ಪದವಿ ಕಾಲೇಜಿನ ವಾರ್ಷಿಕ ವರದಿಯನ್ನು ಓದಿದರು. ತ್ರಿಶಾ ಪಿಯು ಕಾಲೇಜಿನ ಪ್ರಾಂಶುಪಾಲರಾಗಿರುವ ಯಶಸ್ವಿನಿ ಯಶಪಾಲ್‌ ವಾರ್ಷಿಕ ವರದಿಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಸಿದ್ಧಾಂತ ಫೌಂಡೇಶನ್‌ನ ಟ್ರಸ್ಟಿ ನಮಿತಾ ಜಿ ಭಟ್‌, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರು ಸುಫ್ರಭಾ ಎಮ್‌ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ್ರೊ ಸಹನಾ ಶೆಟ್ಟಿ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಸಂಘದ ಮುಖ್ಯಸ್ಥ ವಿಶ್ವಾಸ್‌ ಕೆ ವಂದಿಸಿದರು.

ಪಠ್ಯ ಮತ್ತು ಪಠ್ಯೇತರ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು. ಸಾಧನೆಗೈದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಿಕಾಂನ ವಿದ್ಯಾರ್ಥಿಗಳಾದ ಪನ್ನಗ, ಸಾನ್ವಿ ಮತ್ತು ಎಸ್‌ ಗಣೇಶ ಕಾಮತ್‌ ಕಾರ್ಯಕ್ರಮವನ್ನು ನಿರೂಪಿಸಿದರು.

 

Related Articles

error: Content is protected !!