ಕುಂದಾಪುರ : ಜಿಲ್ಲೆಯ ಶಿರ್ವ ಠಾಣಾ ವ್ಯಾಪ್ತಿಯ ಶಂಕರಪುರದಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಪೋಲಿಸರು ಅದರ ಪ್ರಮುಖ ರೂಖಾರಿಯ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ ಮಟ್ಕಾದ ಪ್ರಮುಖ ರೂವಾರಿ ಲಿಯೋ ಕರ್ನೆಲೋ ಹಾಗು ವಿಠಲ ಬಂಧಿತ ಆರೋಪಿ, ಶಂಕರಮಠದಲ್ಲಿ ಮಟ್ಟಾ ಬರೆಯುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇದರ ಬುಕ್ಕಿ ಲಿಯೋ ಕರ್ನೆಲೋ ಎಂದು ಹೇಳಿದ್ದಾನೆ. ಲಿಯೋನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಕಾರ್ಕಳ ಎಎಸ್ಪಿ ಹರ್ಷಪ್ರಿಯಂವದ ಅವರ ಮಾರ್ಗದರ್ಶನದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮತ್ತು ತಂಡ ಕಾರ್ಯಚರಣೆ ನಡೆಸಿದ್ದಾರೆ.
ಆರೋಪಿ ಲಿಯೋ ಕರ್ನೇಲಿಯೋ ವಿರುದ್ದ ಈಗಾಗಲೇ 34 ಪ್ರಕರಣಗಳು ದಾಖಲಾಗಿದ್ದು, ಆರೋಪಿ ವಿಠಲ ವಿರುದ್ದ ಈಗಾಗಲೇ 12 ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಹರಿರಾಮ್ ಶಂಕರ್ ಅವರು ಒಂದೇ ದಿನದೊಳಗೆ ಜಿಲ್ಲೆಯಲ್ಲಿ ಮಟ್ಕಾ ಆಡಿಸುತ್ತಿದ್ದ ಪ್ರಮುಖ ರೂವಾರಿಯನ್ನು ಬಂಧಿಸಿರುವುದು ಭಾರೀ ಪ್ರಶಂಸೆ ವ್ಯಕ್ತವಾಗಿದೆ.

