ಅಂಚೆ ಕಚೇರಿಯ ಕಾರ್ಯವೈಕರಿಗೆ ಬೆರಗಾದ

ಸರಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಕುಂದಾಪುರ ಇಲ್ಲಿನ ಎನ್ಎಸ್ಎಸ್ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳು ಕುಂದಾಪುರದ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಅಂಚೆ ಕಚೇರಿಯ ಎಟಿಎಂ ಕಾರ್ಡು, ಆನ್ಲೈನ್ ಸೇವೆ ಕಂಡು ಅಂಚೆ ಕಚೇರಿ ಇಷ್ಟೊಂದು ಆಧುನಿಕರಣ ಗೊಂಡಿರುವುದನ್ನು ಕಂಡು ಬೆಕ್ಕಸ ಬೆರಗಾದರು
ಅಂಚೆ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕರಾದ ಪಿ ಎನ್ ಸತೀಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮಾರು ಹೋಗಿರುವ ಯುವ ಸಮುದಾಯ ಅಂಚೆ ಕಚೇರಿಯ ಕಾರ್ಯವೈಖರಿಯ ಬಗ್ಗೆ ಅರಿಯದಾಗಿದ್ದಾರೆ ಆಧುನಿಕತೆ ಸಾಕಷ್ಟು ಬೆಳೆದಿದ್ದರೂ ನಮ್ಮ ಹಿರಿಯರು ಇಂದಿಗೂ ತಮ್ಮ ವೃದ್ಧಾಪ್ಯ ವೇತನ ವಿಧವಾ ವೇತನ ಗಳಿಗಾಗಿ ಅಂಚೆಯಣ್ಣನ ಬರುವಿಕೆಗಾಗಿ ಕಾದು ಕುಳಿತಿರುವುದು ಇಂದು ಕಡಿಮೆಯಾಗಿದ್ದರೂ ಅಂಚೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹಾಗೂ ಅಂಚೆಯು ತನ್ನ ಮಹತ್ವವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ ಎಂದರು ಅಂಚೆ ಪಾಲಕರಾದ ಶ್ರೀ ಮಂಜುನಾಥ ಎಚ್ ಅಂಚೆ ಕಚೇರಿಯಲ್ಲಿ ದೊರೆಯುವ ವಿವಿಧ ಉಳಿತಾಯ ಖಾತೆಗಳು ಜೀವ ವಿಮಾ ಸೇವೆಗಳ ಬಗ್ಗೆ ಮಾಹಿತಿ ನೀಡಿದರು

