289
ಕಟಪಾಡಿ : ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2024ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ತಾಲೂಕಿನ ದೊಡ್ಡನಗುಡ್ಡೆಯ, ತೇಜಸ್ವಿನಿ ಕಾಮತ್ ಉತ್ತೀರ್ಣರಾಗಿದ್ದಾರೆ. ಅವರು ಉದಯ ಕುಮಾರ್ ಎಸ್ ಹಾಗೂ ವಿಜಯಶ್ರೀ ಶೆಣೈ ಎಸ್ ದಂಪತಿಗಳ ಪುತ್ರಿಯಾಗಿದ್ದು, ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್, ಉಡುಪಿ ಸಂಸ್ಥೆಯಲ್ಲಿ ತಮ್ಮ ಆರ್ಟಿಕಲ್ ಶಿಪ್ ನ್ನು ನಡೆಸುತ್ತಿದ್ದಾರೆ . ಅವರು ತಮ್ಮ ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ

