ವಾಷಿಂಗ್ಟನ್ : ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಅವರನ್ನು ಕರೆತರಲು ಟೆಸ್ಲಾ ಸಂಸ್ಥೆಯ ಸ್ಪೇಸ್ ಎಕ್ಸ್ ಮತ್ತು ನಾಸಾ ಕ್ರೂ-10 ಕಾರ್ಯಾಚರಣೆ ಪ್ರಾರಂಭಿಸಿವೆ.
ಕ್ರೂ-10 ಸದಸ್ಯರನ್ನು ಹೊತ್ತ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮಾ. 15 ರಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 7:03 ಕ್ಕೆ ಉಡಾವಣೆಯಾಯಿತು.
ಇದರೊಂದಿಗೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಕ್ಟೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಇದೇ ತಿಂಗಳ 19ರಂದು ವಾಪಸ್ ಭೂಮಿಗೆ ಬರುವುದು ಖಚಿತವಾಗಿದೆ.
ನಾಸಾದ ಆನ್ ಮೆಕ್‌ಕ್ಲೀನ್ ಮತ್ತು ನಿಕೋಲ್ ಅಯರ್ಸ್, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ (ಜೆಎಎಕ್ ಎ) ಟಕುಯಾ ಒನಿಶಿ ಮತ್ತು ರೋಸ್ಟೋಸ್ಟೋಸ್‌ನ ಕಿರಿಲ್ ಪೆಸ್ಕೋವ್ ಈ ಕಾರ್ಯಾಚರಣೆಯಲ್ಲಿದ್ದಾರೆ.
ನಾಸಾ ಹಾಗೂ ಸ್ಪೇಸ್ ಎಕ್ಸ್‌ನ ಗಗನಯಾತ್ರಿಗಳು ಸುನಿತಾ ಹಾಗೂ ವಿಲ್ಲೋರ್ ಅವರನ್ನು ಫಾಲ್ಕನ್ 9 ರಾಕೆಟ್ ನಲ್ಲಿ ಭೂಮಿಗೆ ಕಳುಹಿಸಿ ಅವರ ಬದಲಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಳ್ಳಲಿದ್ದಾರೆ. ಕಾರ್ಯಾಚರಣೆಯ ಮೊದಲ ಎರಡು ದಿನಗಳಲ್ಲಿ ಗಗನಯಾತ್ರಿಗಳನ್ನು ಬದಲಾಯಿಸುವ ಮತ್ತು ಅವರ ಕರ್ತವ್ಯಗಳನ್ನು ವಹಿಸಿಕೊಳ್ಳುವ ಪ್ರಕ್ರಿಯೆಗಳು ನಡೆಯಲಿವೆ.

