Home » ಯುದ್ದ ಬೇಡ ಶಾಂತಿ ಬೇಕು : ಜೆಲೆನ್‌ಸ್ಕಿಗೆ ಮೋದಿ ಕರೆ
 

ಯುದ್ದ ಬೇಡ ಶಾಂತಿ ಬೇಕು : ಜೆಲೆನ್‌ಸ್ಕಿಗೆ ಮೋದಿ ಕರೆ

by Kundapur Xpress
Spread the love

ನವದೆಹಲಿ : ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಉದ್ದೇಶದಿಂದ ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ  ವ್ಯಾಡಿಮಿರ್‌ ಪುಟಿನ್ ಅವರಿಗೆ ಕರೆ ಮಾಡಿ ಮಾತನಾಡಿದ್ದ ಪ್ರಧಾನಿ ಮೋದಿ, ಸೋಮವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿ‌ರ್ ಜೆಲೆನ್‌ಸ್ಕಿ ಅವರೊಂದಿಗೂ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.

‘ಅಧ್ಯಕ್ಷ ಜೆಲೆನ್‌ಸ್ಕಿ ಅವರೊಂದಿಗೆ ಮಾತನಾಡಿದೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರ ದೃಷ್ಟಿಕೋನಗಳನ್ನು ಕೇಳಿ ಸಂತೋಷವಾಗಿದೆ. ಸಂಘರ್ಷದ ಶೀಘ್ರ ಮತ್ತು ಶಾಂತಿಯುತ ಪರಿಹಾರದ ಅಗತ್ಯದ ಬಗ್ಗೆ ನಾನು ಭಾರತದ ಸ್ಥಿರ ನಿಲುವನ್ನು ತಿಳಿಸಿದ್ದೇನೆ. ಉಕ್ರೇನ್‌ನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಈ ನಿಟ್ಟಿನಲ್ಲಿ ಸಾಧ್ಯ ವಿರುವ ಎಲ್ಲ ಕೊಡುಗೆಗಳನ್ನು ನೀಡಲು ಭಾರತ ಬದ್ಧವಾಗಿದೆ’ ಎಂದು ಮೋದಿ ತಿಳಿಸಿದ್ದಾರೆ.

ಇದೇ ವೇಳೆ, ಮಾತುಕತೆ ಕುರಿತು ತಿಳಿಸಿದ ಜೆಲೆನ್‌ಸ್ಕಿ, ‘ನಮ್ಮ ಜನರಿಗೆ ಬೆಂಬಲ ನೀಡುವ ಹಿತಕರ ಮಾತುಗಳಿಗಾಗಿ ನಾನು ಮೋದಿಗೆ ಕೃತಜ್ಞನಾಗಿದ್ದೇನೆ. ಆದರೆ ಈ ಯುದ್ಧವನ್ನು ಮುಂದುವರಿಕೆ ತಡೆಗೆ ರಷ್ಯಾದ ಆರ್ಥಿಕ ಶಕ್ತಿ ಕುಂದಿಸಬೇಕಿದೆ. ಹೀಗಾಗಿ ರಷ್ಯಾದಿಂದ ಇಂಧನ ಆಮದುನ್ನು ಕಡಿಮೆ ಮಾಡಿ ಎಂದು ಮೋದಿಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ

 

Related Articles

error: Content is protected !!