Home » ಮಾರಿಷಸ್ ಭಾರತದ ಪ್ರಮುಖ ಪಾಲುದಾರ
 

ಮಾರಿಷಸ್ ಭಾರತದ ಪ್ರಮುಖ ಪಾಲುದಾರ

: ಪ್ರಧಾನಿ ಮೋದಿ

by Kundapur Xpress
Spread the love

ಹೊಸದಿಲ್ಲಿ : ಮಾರಿಷಸ್‌ ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಭೇಟಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯದಲ್ಲಿ ಹೊಸ ಮತ್ತು ಉಜ್ವಲ ಅಧ್ಯಾಯ ತೆರೆಯಲಿದೆ ಎಂದು ಹೇಳಿದ್ದಾರೆ. ಮಾರಿಷಸ್ ಹಿಂದು ಮಹಾಸಾಗರದ ಪ್ರಮುಖ ಪಾಲುದಾರ ಮತ್ತು ಆಫ್ರಿಕಾ ಖಂಡದ ಹೆಬ್ಬಾಗಿಲು. ನಾವು ಇತಿಹಾಸ, ಭೌಗೋಳಿಕತೆ ಮತ್ತು ಸಂಸ್ಕೃತಿಯ ಮೂಲಕ ಸಂಬಂಧ ಹೊಂದಿದ್ದೇವೆ.

ಪರಸ್ಪರ ನಂಬಿಕೆ. ಪ್ರಜಾಪ್ರಭುತ್ವದ ಮೌಲ್ಯಗಳ ಹಂಚಿಕೆಯ ವಿಶ್ವಾಸ ಮತ್ತು ವೈವಿಧ್ಯತೆ ಆಚರಿಸುವುದು ನಮ್ಮ ಸಾಮರ್ಥ್ಯಗಳಾಗಿವೆ ಎಂದು ಅವರು ಹೇಳಿದರು. ಎರಡೂ ದೇಶಗಳ ಜನರ ನಡುವಿನ ನಿಕಟ ಮತ್ತು ಐತಿಹಾಸಿಕ ಸಂಪರ್ಕದ ಬಗ್ಗೆ ಹೆಮ್ಮೆಯಿದೆ ಎಂದು ಪ್ರಧಾನಿ ಹೇಳಿದರು. ಮಾರ್ಚ್ 11 ಮತ್ತು 12ರಂದು ಮೋದಿ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.

 

Related Articles

error: Content is protected !!