149
ಅಸ್ಲಾಮಾಬಾದ್ : ಭಾರತ ಹಾಗೂ ವಿಶ್ವದ ಅರ್ಧಭಾಗದ ಮೇಲೆ ಅಣ್ವಸ್ತ್ರ ದಾಳಿ ಮಾಡ್ತವೆ. ಮಾಡ್ತವೆ…’ ಹೀಗೆ ಸಾಲು ಸಾಲು ಯುದ್ಧದ ಧಮಕಿಗಳೆಲ್ಲ ಆಯ್ತು, ಇದೀಗ ಸಿಂಧು ನದಿ ಒಪ್ಪಂದ ಮರುಸ್ಥಾಪನೆಗೆ ಉಗ್ರ ಪೋಷಕ ಪಾಕಿಸ್ತಾನವು ಭಾರತದ ಮುಂದೆ ಭಿಕ್ಷೆಗೆ ನಿಂತಿದೆ ಹಾಗೂ ‘ಪಾಕ್‌ಗೆ ನೀರು ಬಿಡಿ’ ಎಂದು ಭಾರತಕ್ಕೆ ಕೋರಿದೆ.
ಬುಧವಾರ ಟ್ವಿಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಸಿಂಧು ನದಿ ಒಪ್ಪಂದವನ್ನು ನಿಷ್ಠೆಯಿಂದ ಮರುಸ್ಥಾಪಿಸುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ’ ಎಂದು ಕೋರಿದೆ.
ಅಲ್ಲದೆ, ಪಾಕಿಸ್ತಾನದ ಅನಿಯಂತ್ರಿತ ಬಳಕೆಗಾಗಿ ಭಾರತವು ಪಶ್ಚಿಮಾಭಿಮುಖವಾಗಿರುವ ನದಿಗಳ ನೀರನ್ನು ಹರಿಯಲು ಬಿಡಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಮೂಲ ಜಲ ಒಪ್ಪಂದದಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಭಾರತ ಬದ್ಧವಾಗಿರಬೇಕು ಎಂದು ಕೂಡ ಕೋರ್ಟು ಹೇಳಿದೆ’ ಎಂದು ಜಲ ಹಂಚಿಕೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪಾಕ್ ಉಲ್ಲೇಖಿಸಿದೆ.

