Home » ಜನನ ಮತ್ತು ಮರಣ ಇವೆರಡರ ನಡುವೆ ಇರೋದು ಜೀವನ
 

ಜನನ ಮತ್ತು ಮರಣ ಇವೆರಡರ ನಡುವೆ ಇರೋದು ಜೀವನ

by Kundapur Xpress
Spread the love

ಜನನದಿಂದ ಮರಣದವರೆಗೆ ಸುಖ ಸಂತೋಷಗಳು ಕಷ್ಟಕಾರ್ಪಣ್ಯಗಳು ಇರುವುದು ಸಾಮಾನ್ಯ. ಮನಸು ಮತ್ತು ಆರೋಗ್ಯ ಜೀವನದ ಎಲ್ಲವನ್ನು ನಿರ್ಧರಿಸುತ್ತದೆ. ಮನಸ್ಸಿನ ಹತೋಟಿ ಜೀವನಕ್ಕೆ ದೃಢತೆ ನೀಡುತ್ತದೆ. ದೇಹದ ಆರೋಗ್ಯಕ್ಕೆ ನಮ್ಮ ದೈನಂದಿನ ಹವ್ಯಾಸಗಳು ದಿನಚರಿಗಳು ಮೂಲ ಕಾರಣ. ಮಾನಸಿಕ ಆರೋಗ್ಯ ಇದಕ್ಕಿಂತ ದೊಡ್ಡ ಸಂಪತ್ತು ಜೀವನದಲ್ಲಿ ಯಾವುದು ಇಲ್ಲ. ಜೀವನದಲ್ಲಿ ಒತ್ತಡ ನಿರ್ವಹಣೆ ಮತ್ತು ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ನಾವು ಏನನ್ನಾದರೂ ಸಾಧಿಸಬಹುದು.

ನಮ್ಮ ಯುವ ಜನಾಂಗದ ಸಮಸ್ಯೆ ಮಾನಸಿಕ ಆರೋಗ್ಯ. ನಮ್ಮ ಜೀವನದಲ್ಲಿ ಬರುವ ಒತ್ತಡ ಮತ್ತು ಕಷ್ಟಕಾರ್ಪಣ್ಯಗಳನ್ನು ಎದುರಿಸುವ ದೃಢತೆ ಈಗಿನವರಿಗೆ ಯಾರಿಗೂ ಬಂದಿಲ್ಲ. ಕಾರಣ ಈಗಿನ ಜೀವನ ಶೈಲಿ ಮತ್ತು ಆಹಾರ. ಪುರಾತನ ಜೀವನ ಶೈಲಿ ಮತ್ತು ಈಗಿನ ಜೀವನಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಆಧುನಿಕ ಆಹಾರ ಶೈಲಿಯಲ್ಲಿ ವಿಷಕಾರಿ ಪದಾರ್ಥಗಳು ಇರುವುದು ಸಾಮಾನ್ಯ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ರಕ್ತದ ಒತ್ತಡ ಸಕ್ಕರೆ ಕಾಯಿಲೆಗಳಂತಹ ಹಲವಾರು ಕಾಯಿಲೆಗಳು ನಮ್ಮ ದೇಹಕ್ಕೆ ಪ್ರವೇಶಿಸುತ್ತವೆ. ಇದರ ಪರಿಣಾಮ ನಮ್ಮ ಆಯಸ್ಸು ಮತ್ತು ನಮ್ಮ ದೇಹದ ಆರೋಗ್ಯ ಶಿಥಿಲವಾಗುತ್ತಾ ಹೋಗುತ್ತದೆ.

ಎಲ್ಲದಕ್ಕೂ ಮೂಲ ಕಾರಣ ಮಾನಸಿಕ ಆರೋಗ್ಯ ಮತ್ತು ನಮ್ಮ ಆಹಾರ ಪದ್ಧತಿಗಳನ್ನು ನಾವು ಸರಿಪಡಿಸಲೇಬೇಕಾಗಿದೆ. ಮಕ್ಕಳಿಗೆ ಮಾನಸಿಕ ದೃಢತೆ ಕೊಡುವಂತಹ ಶೈಕ್ಷಣಿಕ ಪದ್ಧತಿ ಬರಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳಿಗಿಂತಲೂ ಅಧಿಕ ಮಾನಸಿಕ ದೃಢತೆ ಆರೋಗ್ಯ ಬೇಕಿದೆ. ನಮ್ಮ ಆಹಾರ ಪದ್ಧತಿಯನ್ನು ಉತ್ತಮಗೊಳಿಸಲು ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಿದೆ. ಪರಿಸರ ಬೆಳೆಸಿ ಕೃಷಿಗೆ ಮೂಲ ಆದ್ಯತೆ ಕೊಟ್ಟರೆ ನಮಗೆ ದೊರೆಯುವಂತಹ ಆಹಾರದಲ್ಲಿ ಸ್ವಲ್ಪ ಬದಲಾವಣೆ ಬಂದಿತು. ಮನಸ್ಸುಗಳು ಬೆಸೆಯಬೇಕಿದೆ. ಪರಿಸರ ಉಳಿಯಬೇಕಿದೆ. ಯೋಗ ಪ್ರಾಣಾಯಾಮ ದಂತಹ ಇನ್ನೂ ಅನೇಕ ಪದ್ಧತಿಗಳಿಂದ ಮಾನಸಿಕ ಆರೋಗ್ಯವನ್ನು ದೃಢಪಡಿಸಬೇಕಿದೆ. ಮಕ್ಕಳಲ್ಲಿ ಯುವ ಜನತೆಯಲ್ಲಿಯೂ ಮಾನಸಿಕ ಹುರುಪನ್ನು ತುಂಬುವ ಕಾರ್ಯಕ್ರಮ ಬೇಕಿದೆ. ಮಾನಸಿಕ ದೃಢತೆ ಇನ್ನೂ ಬಲಗೊಳ್ಳಬೇಕಿದೆ.

ಪ್ರದೀಪ ಕುಮಾರ್‌ ಕೋಮುಂಜೆ

 

Related Articles

error: Content is protected !!