ಮನುಷ್ಯ ದೇವರಷ್ಟೇ ತಾನು ಒಂದು ಶಕ್ತಿಯಾಗಿ ಮೂಡಿ ಬರಬೇಕೆಂದು ಪ್ರಯತ್ನಿಸಿದರು ಪ್ರಕೃತಿ ಮಾತೆಯ ಎದುರಿಗೆ ಮನುಷ್ಯನು ಕೂಡ ತೃಣ ಸಮಾನ ಎಂಬುದು ಆತನಿಗೆ ಇನ್ನೂ ಅರಿವಾಗಿಲ್ಲ ಪ್ರಕೃತಿ ತನ್ನ ಒಳಗಡೆ ಇಟ್ಟಿರುವ ನಿಗೂಢತೆಗಳಿಗೆ ಲೆಕ್ಕವಿಲ್ಲ ಪ್ರಕೃತಿಯ ಒಂದು ಭಾಗ ನಿಗೂಢತೆಯನ್ನು ಕೂಡ ಮನುಷ್ಯನಿಗೆ ಅರಿಯಲು ಸಾಧ್ಯವಾಗಿಲ್ಲ ಇನ್ನು ಸಾವನ್ನು ಗೆಲ್ಲುವ ಪ್ರಯತ್ನ ಏನು ಮಾಡಿಯಾನು ?
ಮನುಷ್ಯ ಅನೇಕ ಅವಿಷ್ಕಾರಗಳನ್ನು ಮಾಡಿ ಅನೇಕ ವರ್ಷಗಳ ನಂತರ ಒಂದು ನಿಗೂಢತೆಯನ್ನು ಕಂಡು ಹಿಡಿಯುವಷ್ಟರಲ್ಲಿ ಆತನ ಅರ್ಥ ಆಯಸ್ಸು ಮುಗಿದಿರುತ್ತದೆ ಭೂಲೋಕದಲ್ಲಿ ಮನುಷ್ಯರ ವಾಸ ಬಿಟ್ಟು ಬೇರೆ ಲೋಕದಲ್ಲೂ ಮನುಷ್ಯರು ವಾಸ ಸ್ಥಾನ ಇರುವುದೇ ? ಎಂಬ ಆವಿಷ್ಕಾರವನ್ನು ಮಾಡುತ್ತ ಅನೇಕ ವರ್ಷಗಳೇ ಕಳೆದು ಹೋದವು. ಇನ್ನು ಈ ಪ್ರಶ್ನೆಗೆ ನಿಖರವಾದ ಉತ್ತರ ನೀಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ ಪ್ರಕೃತಿಯ ನಿಯಮ ವಿಜ್ಞಾನಿಗಳ ವ್ಯಾಖ್ಯಾನದಂತೆ ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ ನಾಶಪಡಿಸಲು ಸಾಧ್ಯವಿಲ್ಲ ವಿಜ್ಞಾನವೆಂಬುದು ಆವಿಷ್ಕಾರಗಳಿಂದ ಕೂಡಿದ ಜಗತ್ತು ಮನುಷ್ಯ ನೂರು ಜನ್ಮ ಪಡೆದು ಬಂದರು ಪ್ರಕೃತಿಯ ನಿಗೂಢತೆಗಳನ್ನು ಕಂಡು ಹಿಡಿಯುವುದು ಕಷ್ಟ ಸಾಧ್ಯ ಮನುಷ್ಯನು ಹಕ್ಕಿಯಂತೆ ಹಾರಬಲ್ಲ ಮೀನಿನಂತೆ ಈಜಬಲ್ಲ ಯಂತ್ರಗಳನ್ನು ಕಂಡುಹಿಡಿದ ಅನೇಕ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಆವಿಷ್ಕಾರದಿಂದಲೂ ಪ್ರಕೃತಿಯ ನಿಗೂಢತೆ ಮತ್ತು ಸಾವಿನ ನಿಗೂಢತೆ ಕಂಡುಹಿಡಿಯಲು ಮನುಷ್ಯನಿಗೆ ಇನ್ನೂ ಸಾಧ್ಯವಾಗಿಲ್ಲ.
ಅನೇಕ ವರ್ಷಗಳ ಹಿಂದಿನ ಮಾತು ಪ್ರಕೃತಿಯ ನಿಗೂಢತೆಗೆ ವಿಜ್ಞಾನಿಗಳೆ ದಂಗಾಗಿ ಹೋಗಿದ್ದರು ವಿದೇಶಿಯರು ಉಡಾಯಿಸಿದ ಉಪಗ್ರಹ ಯಾವುದೋ ಒಂದು ಸ್ಥಳದಲ್ಲಿ ಮೂರು ನಿಮಿಷ ನಿಯಂತ್ರಣವಿಲ್ಲದೆ ಸ್ತಬ್ಧವಾಗಿ ನಿಲ್ಲುತ್ತಿತ್ತು .
ಉಪಗ್ರಹ ಈ ರೀತಿಯ ನಿಯಂತ್ರಣ ತಪ್ಪುತ್ತಿರುವುದಕ್ಕೆ ಕಾರಣವನ್ನು ಹುಡುಕಿದಾಗ ಉಪಗ್ರಹ ನಿಯಂತ್ರಣ ಕಳೆದುಕೊಳ್ಳುತ್ತಿರುವ ಕ್ಷೇತ್ರದ ಕೆಳಗಡೆ ಶನೇಶ್ವರ ದೇವರ ದೇವಸ್ಥಾನ ಇರುವುದು ವಿಜ್ಞಾನಿಗಳು ಕಂಡುಹಿಡಿದರು. ಈ ಶನೇಶ್ವರ ದೇವಸ್ಥಾನ ಇರುವುದು ಚೆನ್ನೈನಲ್ಲಿ . ಉಪಗ್ರಹ ಉಡಾಯಿಸಿದ ವಿದೇಶಿಯ ವಿಜ್ಞಾನಿಗಳ ತಂಡ ಈ ದೇವಸ್ಥಾನಕ್ಕೆ ಭೇಟಿಕೊಟ್ಟು ಹೋದಂತಹ ಘಟನೆ ನಿಜಕ್ಕೂ ವಿಸ್ಮಯಗೊಳಿಸುವಂತಹ ನಿಗೂಢ ವಿಷಯ
ಪ್ರಕೃತಿಯ ನಿಗೂಢತೆಗೆ ಇದೊಂದು ಉದಾಹರಣೆ ಅಷ್ಟೇ ಇಂತಹ ಹಲವಾರು ನಿಗೂಢತೆಗಳಿಗೆ ಪ್ರಕೃತಿ ಸಾಕ್ಷಿಯಾಗಿದೆ ಪ್ರಕೃತಿಯು ತನ್ನ ಸಮತೋಲನ ತಪ್ಪಿದರೆ ತನ್ನನ್ನು ತಾನೇ ಸಮತೋಲಿಸುತ್ತದೆ ಆದರೆ ಪ್ರಕೃತಿ ತನ್ನನ್ನು ತಾನು ಸಮತೋಲಿಸಿ ಕೊಂಡಾಗ ಮನುಜ ಮಧ್ಯದಲ್ಲಿ ಸಿಕ್ಕಿದರೆ ಆತ ನಿರ್ನಾಮವಾಗುತ್ತಾನೆ ಪ್ರಕೃತಿ ಮಾತೆ ಶಾಂತವಾಗಿದ್ದರೆ ಆಕೆಯ ಸೌಂದರ್ಯ ನೋಡುವುದೇ ಚೆನ್ನ ಆಕೆ ತನ್ನ ರುದ್ರ ನರ್ತನವನ್ನು ಶುರು ಮಾಡಿದರೆ ಮಾನವ ಸರ್ವನಾಶವಾಗುವುದು ಖಂಡಿತ