Home » ದೇವನೊಬ್ಬ ನಾಮ ಹಲವು
 

ದೇವನೊಬ್ಬ ನಾಮ ಹಲವು

by Kundapur Xpress
Spread the love

ನಮ್ಮಲ್ಲಿ ಮೂರು ಕೋಟಿ ದೇವತೆಗಳಿದ್ದರೂ ಕೂಡ ಪ್ರೇರಕ ಶಕ್ತಿ ಒಂದೇ ಎಂಬುದನ್ನು ವೇದಗಳಲ್ಲಿ ನಾವು ಕಾಣಬಹುದು. ಎಲ್ಲದಕ್ಕೂ ಪ್ರಕೃತಿಯೇ ಮೂಲ ಆಧಾರ. ಪಂಚಭೂತಗಳು ಅದರ ಬೇರೆ ಬೇರೆ ರೂಪಗಳು.

ಹಾಗಾದರೆ ಪ್ರಕೃತಿಯ ಮೂಲರೂಪ ಯಾವುದು ?
ಅದರ ಬೇರೆ ಬೇರೆ ಶಕ್ತಿಗಳು ಯಾವುದು ?

ಪ್ರಕೃತಿಯ ಮೂಲ ರೂಪ ಓಂಕಾರ. ಪಂಚಭೂತಗಳು ಪ್ರಕೃತಿಯ ಬೇರೆ ಬೇರೆ ರೂಪಗಳು. ಧರ್ಮ ಯಾವುದಾದರೂ ಪ್ರಕೃತಿಯೇ ಇಲ್ಲದಕ್ಕೂ ಮೂಲ. ಓಂಕಾರ ವೇದದ ಮೊದಲ ಬೀಜಾಕ್ಷರ. ಯಾವುದೇ ಶ್ಲೋಕದ ಮೊದಲು ಬರುವ ಅಕ್ಷರವೇ ಓಂಕಾರ. ಓಂಕಾರಕ್ಕೆ ಅದರದೇ ಆದಂತಹ ಝೇಂಕಾರವಿದೆ. ಓಂಕಾರವಿಲ್ಲದ ಜಾಗವಿಲ್ಲ. ಓಂಕಾರವಿಲ್ಲದೆ ವಿಜ್ಞಾನವಿಲ್ಲ. ಓಂಕಾರವಿಲ್ಲದೆ ಪ್ರಕೃತಿಯು ಇಲ್ಲ. ಅಹಂ ಬ್ರಹ್ಮಾಸ್ಮಿ , ತತ್ವಮಸಿ , ಇವೆಲ್ಲದರ ಮೂಲ ಅರ್ಥ ಓಂಕಾರ. ಸೂರ್ಯನಿಂದ ಬರುವಂತಹ ಒಂದೊಂದು ಕಿರಣದಲ್ಲು ತುಂಬಿರುವ ಶಕ್ತಿ ಓಂಕಾರ. ವೈಜ್ಞಾನಿಕವಾಗಿ ಸೂರ್ಯನಿಂದ ಬರುವಂತಹ ಶಬ್ದ ಓಂಕಾರ ಎಂದು ಹೇಳಲಾಗಿದೆ. ವೈಜ್ಞಾನಿಕವಾಗಿ ರೆಸೋನೆನ್ಸ್ ಎಫೆಕ್ಟ್ ಇದು ಓಂಕಾರದ ಇನ್ನೊಂದು ರೂಪ. ಸಮುದ್ರದ ಆಳವನ್ನು ಕಂಡುಹಿಡಿಯಲು ಉಪಯೋಗಿಸುವ ಸೋನಾರ್ ಉಪಕರಣದಲ್ಲಿಯೂ ಕೂಡ ಉಪಯೋಗಿಸುವ ಶಬ್ದದ ಮೂಲ ರೂಪ ಓಂಕಾರ. ಜೀವನ, ಜ್ಞಾನ ,ವಿಜ್ಞಾನ ಅದರಾಚೆಗಿರುವ ಅದ್ಭುತ ಒಂದು ಶಕ್ತಿ ಓಂಕಾರ. ಮೂಲ ರೂಪ ಓಂಕಾರ ಶಬ್ದಗಳು ,ಸಂಗೀತಗಳು , ವೇದಗಳು , ವಿಜ್ಞಾನ , ಪಂಚಭೂತಗಳು, ಓಂಕಾರದ ಬೇರೆ ಬೇರೆ ರೂಪಗಳು. ಗಾಯತ್ರಿ ಮಂತ್ರಕ್ಕೂ ಮೊದಲು ಓಂಕಾರದ ಬೀಜಾಕ್ಷರದಿಂದ ಶುರುವಾಗುತ್ತದೆ. ನಮ್ಮ ಒಳಗಿನ ಓಂಕಾರವನ್ನು ಅರಿತರೆ ಆತ್ಮ ಸಾಕ್ಷಾತ್ಕಾರವಾಗುತ್ತದೆ. ಯೋಗದ ಮೂಲ ಮಂತ್ರ ಮತ್ತು ಮೂಲ ತಂತ್ರವು ಕೂಡ ಓಂಕಾರ ಆಗಿದೆ. ಓಂಕಾರವೆಂದರೆ ಆಕಾರವಿಲ್ಲದ ಶಕ್ತಿಯುತ ದೇವರ ಮೂಲ ರೂಪ.

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

 

Related Articles

error: Content is protected !!